Sunday, July 3, 2022
Home ಸಮಾಚಾರ ರಾಜ್ಯ ವಾರ್ತೆ ಮುಖ್ಯಮಂತ್ರಿಯಿಂದ ಕೆ.ಎಸ್.ಎಫ್.ಸಿ. ಕಿರುಹೊತ್ತಗೆ ಬಿಡುಗಡೆ

ಮುಖ್ಯಮಂತ್ರಿಯಿಂದ ಕೆ.ಎಸ್.ಎಫ್.ಸಿ. ಕಿರುಹೊತ್ತಗೆ ಬಿಡುಗಡೆ

ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆ.ಎಸ್.ಎಫ್.ಸಿ) ದೇಶದ ಮುಂಚೂಣಿ ಹಣಕಾಸು ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ದೀರ್ಘಕಾಲೀನ ಮತ್ತು ಅಲ್ಪಾವಧಿಯ ಆರ್ಥಿಕ ಅಗತ್ಯತೆ ಪೂರೈಸುತ್ತಿದೆ. 1959ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸಂಸ್ಥೆ ರಾಜ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದೆ.

ರಾಜ್ಯ ಸುಸ್ಥಿರ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದು, ಪ್ರಸ್ತುತ 2,208 ಕೋ. ರೂ. ಆಸ್ತಿ ಹೊಂದಿ, ದೇಶದ ಪ್ರಮುಖ ರಾಜ್ಯ ಹಣಕಾಸು ನಿಗಮಗಳಲ್ಲಿ ಒಂದಾಗಿದೆ.

ಕೆ.ಎಸ್.ಎಫ್.ಸಿ. ತನ್ನ ಸ್ಥಾಪಿತ ಅವಧಿಯಲ್ಲಿ 11 ಘಟಕಗಳಿಗೆ 28 ಲಕ್ಷ ರೂ. ಸಾಲ ಮಂಜೂರು ಮಾಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಶಾಖೆಗಳ ಮೂಲಕ 1.75 ಲಕ್ಷಕ್ಕೂ ಹೆಚ್ಚು ಘಟಕಗಳಿಗೆ 18 ಸಾವಿರ ಕೋ. ರೂ.ಗೂ ಹೆಚ್ಚು ಸಂಚಿತ ಸಾಲ ಮಂಜೂರು ಮಾಡಿದೆ. ಅದರಲ್ಲಿ ಶೇ. 50ಕ್ಕಿಂತ ಹೆಚ್ಚು ಸಾಲ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನೀಡಿದ್ದು, ಸಂಸ್ಥೆ ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಸಂಸ್ಥೆ 2019- 20ರ ಆರ್ಥಿಕ ವರ್ಷದಲ್ಲಿ 44.92 ಕೋ. ರೂ. ನಿರ್ವಹಣಾ ಲಾಭವನ್ನೂ ಗಳಿಸಿದೆ.

ಕೆ.ಎಸ್.ಎಫ್.ಸಿ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಸಂಸ್ಥೆಯಿಂದ ಹಣಕಾಸು ನೆರವು ಪಡೆದು ಯಶಸ್ವಿಯಾದ ಕೆಲವು ಉದ್ಯಮಿಗಳ ಯಶೋಗಾಥೆಯನ್ನೊಳಗೊಂಡ ಕೇಂದ್ರ ಹಾಗೂ ರಾಜ್ಯ ಸಾರ್ವಜನಿಕ ಉದ್ಯಮಗಳ ಸಹಾಯದಿಂದ ಕಿರುಹೊತ್ತಗೆಯನ್ನು ಕೆ.ಎಸ್.ಎಫ್.ಸಿ.ಯ 60ನೇ ವರ್ಷಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈಚೆಗೆ ವಿಧಾನಸೌಧ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಡಿಸಿಎಂ ಅಶ್ವತ್ಥನಾರಾಯಣ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೆ.ಎಸ್.ಎಫ್.ಸಿ. ವ್ಯವಸ್ಥಾಪಕ ನಿರ್ದೇಶಕಿ ಏಕ್ರೂಪ್ ಕೌರ್, ಕೆ.ಎಸ್.ಎಫ್.ಸಿ. ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ. ಸಿ. ಶಿವಪ್ರಕಾಶ್ ಮತ್ತು ಜಿ. ವಿ. ಚಂದ್ರಕುಮಾರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!