Sunday, July 3, 2022
Home ಸಮಾಚಾರ ಅಪರಾಧ ಲವ್ ಜಿಹಾದ್:ಯುವತಿ ಆತ್ಮಹತ್ಯೆ?

ಲವ್ ಜಿಹಾದ್:ಯುವತಿ ಆತ್ಮಹತ್ಯೆ?

ಸುದ್ದಿಕಿರಣ ವರದಿ
ಗುರುವಾರ, ಮೇ 26

ಲವ್ ಜಿಹಾದ್: ಲವ್ ಜಿಹಾದ್:ಯುವತಿ ಆತ್ಮಹತ್ಯೆ?
ಕುಂದಾಪುರ: ಲವ್ ಜಿಹಾದ್ ವಿವಾದ ದೇಶಾದ್ಯಾಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ ಯುವತಿಯೊಬ್ಬಳು ಲವ್ ಜಿಹಾದ್ ಪಾಶಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇಲ್ಲಿಗೆ ಸಮೀಪದ ಕೋಟೇಶ್ವರದ ಅಜೀಜ್ (34) ಎಂಬಾತ ಉಪ್ಪಿನಕುದ್ರು ನಿವಾಸಿ ಶಿಲ್ಪಾ ಎಂಬಾಕೆಯನ್ನು ಪ್ರೀತಿಯ ನಾಟಕವಾಡಿ, ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿದ್ದ.

ಸುಮಾರು ಐದು ವರ್ಷದ ಅವರ ಪ್ರೇಮ ಸಂಬಂಧದಲ್ಲಿ ದೈಹಿಕ ಸಂಬಂಧ ಕೂಡಾ ನಡೆದಿತ್ತು.

ವಿವಾಹಿತ ಅಜೀಜ್
ಈಗಾಗಲೇ ಅಜೀಜ್ ಗೆ ಮದುವೆಯಾಗಿತ್ತು. ಆದರೂ ಶಿಲ್ಪಾಳನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಆಗಾಗ ತನ್ನ ಫ್ಲ್ಯಾಟ್ ಗೆ ಕರೆಸಿಕೊಂಡು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ.

ಅದಕ್ಕೆ ಅಜೀಜ್ ಪತ್ನಿ ಕೂಡಾ ಪತಿಗೆ ಸಹಾಯ ಮಾಡುತ್ತಿದ್ದಳು!

ಮತಾಂತರಕ್ಕೆ ಆಗ್ರಹ
ಆದರೆ, ತನ್ನನ್ನು ಮದುವೆಯಾಗಬೇಕಾದರೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಅಜೀಜ್ ಶಿಲ್ಪಾಳಿಗೆ ಕಂಡಿಷನ್ ಹಾಕಿದ್ದು, ಅದರಿಂದ ಬೇಸತ್ತ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದು ಲವ್ ಜಿಹಾದ್ ಎಂದು ಶಿಲ್ಪಾ ಸಹೋದರ ಸೇರಿದಂತೆ ಹಿಂದೂ ಪರ ಸಂಘಟನೆಗಳು ಕುಂದಾಪುರ ಪೋಲಿಸರಿಗೆ ದೂರು ನೀಡಿದ್ದಾರೆ.

ಕ್ರಿಮಿನಲ್ ಅಜೀಜ್
ಅಜೀಜ್ ನಟೋರಿಯಸ್ ಕ್ರಿಮಿನಲ್ ಆಗಿದ್ದು ಅಕ್ರಮ ದನ ಸಾಗಾಟ, ಪಡಿತರ ಅಕ್ಕಿ ಸಾಗಾಟ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿ ಅನೇಕ ಬಾರಿ ಅವನ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಸ್ತುತ ಅಜೀಜ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೋಲಿಸರು ಮೂರು ತಂಡ ರಚಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!