Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ರಾಷ್ಟ್ರಧ್ವಜ ವಿತರಣೆಗೆ ಚಾಲನೆ

ರಾಷ್ಟ್ರಧ್ವಜ ವಿತರಣೆಗೆ ಚಾಲನೆ

ಸುದ್ದಿಕಿರಣ ವರದಿ
ಶನಿವಾರ, ಆಗಸ್ಟ್ 6

ರಾಷ್ಟ್ರಧ್ವಜ ವಿತರಣೆಗೆ ಚಾಲನೆ
ಕುಂದಾಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನಮಂತ್ರಿ ಮೋದಿಯವರ ಮಹತ್ತರ ಯೋಜನೆಯಾದ ಹರ್ ಘರ್ ತಿರಂಗ ಕಾರ್ಯಕ್ರಮದಡಿ ಎಲ್ಲಾ ಮನೆಗಳಲ್ಲಿ ಆಗಸ್ಟ್ 13ರಿಂದ 15ರ ವರೆಗೆ ರಾಷ್ಟ್ರ ಧ್ವಜವನ್ನು ಹಾರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ. ಎನ್. ಹೇಳಿದರು.

ಕೋಟೇಶ್ವರದ ಎಲ್.ಜಿ. ಇಂಡಸ್ಟ್ರೀಸ್ ನಲ್ಲಿ ಸಂಸ್ಥೆ ವತಿಯಿಂದ ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ಸಂಸ್ಥೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರತೀ ಮನೆಗಳಲ್ಲಿಯೂ ಧ್ವಜ ಹಾರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಮಿಕರಿಗೆ ರಾಷ್ಟ್ರಧ್ವಜ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಆರೋಗ್ಯ ಅಧಿಕಾರಿ ಡಾ. ಪೂರ್ಣಿಮಾ, ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯ ಯೋಗಿ ನಾಯಕ್, ಸಂಸ್ಥೆಯ ದೀಕ್ಷಾ ಕಾಮತ್ ಮತ್ತು ಹರ್ಷಾ ಕಾಮತ್ ಮೊದಲಾದವರಿದ್ದರು.

ಅಶೋಕ್ ಭಂಡಾರ್ಕರ್ ನಿರೂಪಿಸಿದರು. ಹರ್ಷಾ ಕಾಮತ್ ಸ್ವಾಗತಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!