Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪರಿಸರ ನಾಶವಾದರೆ ಉಸಿರು ಕಟ್ಟುವ ಪರಿಸ್ಥಿತಿ ನಿರ್ಮಾಣ

ಪರಿಸರ ನಾಶವಾದರೆ ಉಸಿರು ಕಟ್ಟುವ ಪರಿಸ್ಥಿತಿ ನಿರ್ಮಾಣ

ಮಣಿಪಾಲ: ದೇಶದ ಜನಸಂಖ್ಯೆಗೆ ಅನುಗುಣವಾಗಿ ಶೇ. 33ರಷ್ಟು ಅರಣ್ಯ ಇರಬೇಕು. ಪ್ರಸ್ತುತ ಕೇವಲ ಶೇ. 17ರಷ್ಟು ಅರಣ್ಯ ಇದೆ. ಪರಿಸರ ನಾಶ ಮುಂದುವರಿದಲ್ಲಿ ಆಮ್ಲಜನಕದ ಕೊರತೆಯುಂಟಾಗಿ ಉಸಿರು ಕಟ್ಟುವ ಪರಿಸ್ಥಿತಿ ನಿರ್ಮಾಣವಾದೀತು ಎಂದು ಉಪವಲಯ ಅರಣ್ಯಾಧಿಕಾರಿ ಸುರೇಶ್ ಜಿ. ಎಚ್ಚರಿಸಿದರು.

ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಶ್ರಯದಲ್ಲಿ ಅರಣ್ಯ ಇಲಾಖೆ ಮತ್ತು ಚೌಡೇಶ್ವರಿ ಫ್ರೆಂಡ್ಸ್ ಶಾಂತಿನಗರ ಸಹಯೋಗದೊಂದಿಗೆ ಶನಿವಾರ ಇಲ್ಲಿನ ಶಾಂತಿನಗರ ರಸ್ತೆ ಇಕ್ಕೆಲಗಳಲ್ಲಿ ಸಾಲು ಗಿಡಗಳನ್ನು ನೆಡುವ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಸಿ ನೆಟ್ಟು ಪೋಷಿಸುವ ಮತ್ತು ಪರಿಸರ ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಬೇಕು ಎಂದರು.

ಅಭ್ಯಾಗತರಾಗಿದ್ದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಜನಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್, ಮುಂದಿನ ತಲೆಮಾರಿಗೆ ಸ್ವಚ್ಛ ಮತ್ತು ಹಸಿರು ಪರಿಸರ ಒದಗಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕರಾದ ದೇವರಾಜ್ ಪಾಣ ಮತ್ತು ಕೇಶವ ಪೂಜಾರಿ, ಚೌಡೇಶ್ವರಿ ಫ್ರೆಂಡ್ಸ್ ಅಧ್ಯಕ್ಷ ವಿನಯ ಕುಂದರ್, ರಾಘವೇಂದ್ರ ರಾವ್, ರತ್ನಾಕರ ಶೆಟ್ಟಿ, ಸತೀಶ್ ಪೂಜಾರಿ, ಸುಧಾಕರ ಶೆಟ್ಟಿ, ಮೋಹನ್ ಶಾಂತಿನಗರ, ನಾಗರಿಕ ಸಮಿತಿಯ ಕೃಷ್ಣಮೂರ್ತಿ ಸಾಮಗ, ವಿನೋದ ಸಾಮಗ, ಯುಕ್ತಾ ಸಾಮಗ, ಕೆ. ಬಾಲಗಂಗಾಧರ ರಾವ್, ಕಮಲಾಕ್ಷ ಪ್ರಭು, ತಾರಾನಾಥ ಮೇಸ್ತ ಶಿರೂರು ಇದ್ದರು.

ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಸ್ವಾಗತಿಸಿ, ಪರಿಸರಪ್ರೇಮಿ ವಿನಯಚಂದ್ರ ಸಾಸ್ತಾನ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!