Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಪಲ್ಸ್ ಪೋಲಿಯೊ ಜಾಗೃತಿ ಕಲಾಕೃತಿ

ಪಲ್ಸ್ ಪೋಲಿಯೊ ಜಾಗೃತಿ ಕಲಾಕೃತಿ

ಸುದ್ದಿಕಿರಣ ವರದಿ
ಶನಿವಾರ, ಫೆಬ್ರವರಿ 26

ಪಲ್ಸ್ ಪೋಲಿಯೊ ಜಾಗೃತಿ ಕಲಾಕೃತಿ
ಉಡುಪಿ: ರಾಷ್ಟ್ರೀಯ ಪಲ್ಸ್ ಪೋಲಿಯೊ ದಿನಾಚರಣೆ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ ಮಣಿಪಾಲ ಸಹಯೋಗದೊಂದಿಗೆ ವಿಭಾಗದ ಕಲಾವಿದ ಶ್ರೀನಾಥ ಮಣಿಪಾಲ ರಚಿಸಿದ ಕಲಾಕೃತಿಯನ್ನು ಶನಿವಾರ ಅನಾವರಣಗೊಳಿಸಲಾಯಿತು.

ಸುಮಾರು 2 ಸಾವಿರ ಹಳೆಯ ಲಸಿಕೆಗಳ ಬಾಟಲಿಗಳನ್ನು ಬಳಸಿ ಎರಡು ಹನಿ ಲಸಿಕೆ- ಮಗುವಿನ ಆರೋಗ್ಯಕ್ಕೆ ಬುನಾದಿ ಎಂಬ ಘೋಷಣೆಯಡಿ ಮಗುವಿಗೆ ಪೋಲಿಯೊ ಲಸಿಕೆ ನೀಡುವ ಜಾಗೃತಿ ಕಲಾಕೃತಿ ರಚಿಸಿದರು.

ಕಲಾಕೃತಿಯನ್ನು ಮಣಿಪಾಲ ಕೆ.ಎಂ.ಸಿ ಗ್ರೀನ್ಸ್ ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಅಧಿಕಾರಿ ಡಾ. ನಾಗಭೂಷಣ ಉಡುಪ ಹಾಗೂ ಕೆ.ಎಂ.ಸಿ ಮಣಿಪಾಲ ಡೀನ್ ಡಾ. ಶರತ್ ರಾವ್ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್, ಸಹ ಪ್ರಾಧ್ಯಾಪಕರಾದ ಡಾ. ಮುರಳಿಧರ ಕುಲಕರ್ಣಿ, ಡಾ. ರಂಜಿತಾ ಶೆಟ್ಟಿ, ಡಾ. ಸ್ನೇಹಾ ಕಾಮತ್, ಡಾ. ದಿವ್ಯಾ ಪೈ, ಸಹ ಪ್ರಾಧ್ಯಾಪಕಿ ಡಾ. ಈಶ್ವರಿ, ಕಲಾವಿದ ಶ್ರೀನಾಥ ಮಣಿಪಾಲ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!