ಸುದ್ದಿಕಿರಣ ವರದಿ
ಭಾನುವಾರ, ಜುಲೈ 17
ಪಿ.ಆರ್.ಸಿ.ಐ ಅತ್ಯುತ್ತಮ ಸೌತ್ ಝೋನ್ ಉದ್ದಿಮೆದಾರ ಪ್ರಶಸ್ತಿ ಪ್ರದಾನ
ಮಂಗಳೂರು: ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ಇಲ್ಲಿನ ಓಷಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ವಿಶ್ವ ಸಾರ್ವಜನಿಕ ಸಂಪರ್ಕ ದಿನಾಚರಣೆಯಲ್ಲಿ ಗೌತಮ್ ಏಜೆನ್ಸಿ ಫಾರ್ಮಾ ಸಂಸ್ಥೆಯ ಸುಮತಾ ನಾಯಕ್ ಅವರಿಗೆ ಅತ್ಯುತ್ತಮ ಸೌತ್ ಝೋನ್ ಉದ್ದಿಮೆದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಿ.ಆರ್.ಸಿ.ಐ ಸ್ಥಾಪಕ ಅಧ್ಯಕ್ಷ ಎಂ. ಬಿ ಜಯರಾಮ್, ರಾಷ್ಟ್ರೀಯ ಅಧ್ಯಕ್ಷ ಟಿ. ವಿನಯ ಕುಮಾರ್, ದಕ್ಷಿಣ ವಲಯ ಅಧ್ಯಕ್ಷೆ ಲತಾ, ಪಶುಪತಿ ಶರ್ಮ, ಉಡುಪಿ ಘಟಕ ಅಧ್ಯಕ್ಷ ನಾಗರಾಜ ಹೆಬ್ಬಾರ್, ಸುರೇಶ ಬೀಡು, ರೇಖಾ ಪೈ, ಮಂಜುಳಾ ನಾಗರಾಜ್, ಕಾರ್ಯದರ್ಶಿ ರಾಘವೇಂದ್ರ ಕರ್ವಾಲು ಇದ್ದರು.