Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷರಾಗಿ ಪ್ರೊ. ಶಂಕರ್ ಪುನರಾಯ್ಕೆ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷರಾಗಿ ಪ್ರೊ. ಶಂಕರ್ ಪುನರಾಯ್ಕೆ

ಸುದ್ದಿಕಿರಣ ವರದಿ
ಬುಧವಾರ, ಜುಲೈ 20

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷರಾಗಿ ಪ್ರೊ. ಶಂಕರ್ ಪುನರಾಯ್ಕೆ
ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷರಾಗಿ ಗಿಲಿ ಗಿಲಿ ಜಾದೂ ಖ್ಯಾತಿಯ ಪ್ರೊ. ಶಂಕರ್ ಪುನರಾಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣೈ ಆಯ್ಕೆಯಾಗಿದ್ದಾರೆ.

ಮಥುರಾ ಛತ್ರದಲ್ಲಿ ಈಚೆಗೆ ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ ಹೆಬ್ಬಾರ್, ಸಂಧ್ಯಾ ಶೆಣೈ, ಜೀವನ್ ರಾಂ ಸುಳ್ಯ, ವಿಘ್ನೇಶ್ವರ ಅಡಿಗ, ಮಧುಸೂದನ ಹೇರೂರು ಮತ್ತು ಸುಗುಣ ಸುವರ್ಣ, ಗೌರವ ಸಲಹೆಗಾರರಾಗಿ ಜಯಕರ ಶೆಟ್ಟಿ ಇಂದ್ರಾಳಿ, ರವೀಂದ್ರ ಪೂಜಾರಿ ತೆಳ್ಳಾರು, ರಾಜಗೋಪಾಲ್ ಬಲ್ಲಾಳ, ಡಾ. ಸುರೇಶ್ ಶೆಣೈ, ಡಾ. ಹರಿಶ್ಚಂದ್ರ, ಡಾ. ವಿರೂಪಾಕ್ಷ ದೇವರಮನೆ, ಡಾ. ವಿಜಯೇಂದ್ರ ವಸಂತ್, ಜನಾರ್ದನ ಕೊಡವೂರು, ಹಫೀಜ್ ರೆಹಮಾನ್ ಮತ್ತು ಮನೋಹರ್ ಶೆಟ್ಟಿ ತೋನ್ಸೆ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ತಂತ್ರಿ, ಕಾರ್ಯದರ್ಶಿಗಳಾಗಿ ಶಿಲ್ಪಾ ಜೋಶಿ ಮತ್ತು ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು ಹಾಗೂ ಸಂಚಾಲಕರಾಗಿ ರವಿರಾಜ್ ಎಚ್. ಪಿ ಆಯ್ಕೆಯಾದರು.

ವಿಶೇಷ ಆಹ್ವಾನಿತರಾಗಿ ವಿವೇಕಾನಂದ ಎನ್., ಸದಾನಂದ ಶೆಣೈ, ಪೂರ್ಣಿಮಾ ಜನಾರ್ದನ್, ಸೋಮನಾಥ್ ಚಿಟ್ಪಾಡಿ, ವಿದ್ಯಾ ಶ್ಯಾಮಸುಂದರ್, ಸುಮಿತ್ರ ಕೆರೆಮಠ, ಪದ್ಮಾಸಿನಿ ಉದ್ಯಾವರ, ಗಣೇಶ್ ಬ್ರಹ್ಮಾವರ, ರಾಘವೇಂದ್ರ ಅಜೆಕಾರ್, ನರಸಿಂಹಮೂರ್ತಿ, ರಂಜಿನಿ ವಸಂತ್, ಅನಂತ ಶೆಣೈ, ನಂದಾ ಪೇಟ್ಕರ್, ಶೃತಿ ಕಾಶಿ, ಪ್ರಶಾಂತ್ ಕಾಮತ್, ಅಮೃತಾ ಬಿ., ವಿನಾಯಕ ಬಾಳಿಗ, ರಾಮದಾಸ ಶೆಣೈ, ರಾಘವೇಂದ್ರ ಪ್ರಭು ಕರ್ವಾಲು, ರಂಜಿತಾ ಶೇಟ್ ಮತ್ತು ನಿತಿನ್ ಕುಕ್ಕಿಕಟ್ಟೆ ಹಾಗೂ ಯುವ ಬಳಗದ ಅಧ್ಯಕ್ಷೆಯಾಗಿ ಶ್ರೀಲಕ್ಷ್ಮಿ ಆಚಾರ್ಯ ಆಯ್ಕೆಯಾಗಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!