Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಕ್ಷೇತ್ರಾಧಿಕಾರಿ ಶ್ರೀ ರಮಾನಂದ ಗುರೂಜಿ ಅವರಿಗೆ ಕಲ್ಯಾಣ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈಚೆಗೆ ನಾಡಿನ ಹಿರಿಯ ಪತ್ರಕರ್ತ, ಚಲನಚಿತ್ರ ನಿರ್ದೇಶಕ ರಮೇಶ್ ಸುರ್ವೆ ಅಧ್ಯಕ್ಷತೆಯಲ್ಲಿ ಕೊಪ್ಪಳದಲ್ಲಿ ನಡೆದ ವಿಜಯನಗರ ಕರ್ನಾಟಕ ದ್ವಿತೀಯ ಸಾಹಿತ್ಯ ಸಮ್ಮೇಳನ ಹಾಗೂ ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ, ಚಿತ್ರನಟ ಡಾ| ನೆ. ಲ. ನರೇಂದ್ರಬಾಬು ಪ್ರಶಸ್ತಿ ನೀಡಿದರು.

ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶಕುಮಾರ್ ಹೊಸಮನಿ, ಚಿತ್ರ ನಟಿ ಮೀನಾ, ಚಿಪ್ಪಲಕಟ್ಟಿ ಕಲ್ಮೇಶ್ವರ ಸ್ವಾಮೀಜಿ, ಕವಯಿತ್ರಿ ಸಾವಿತ್ರಿ ಮಜುಂದಾರ್, ಕಾವ್ಯ, ನಾಡೋಜ ಬಿ. ವಿ. ಸತ್ಯನಾರಾಯಣ ರಾವ್ ಪ್ರತಿಷ್ಠಾನ ಅಧ್ಯಕ್ಷ ರುದ್ರಪ್ಪ ಭಂಡಾರಿ, ಹಿರಿಯ ಅಧಿಕಾರಿ ಮೋಹನಕೃಷ್ಣ ಸಿಂಗ್, ಖ್ಯಾತ ಕ್ರೀಡಾಪಟು ಬಿ. ಕೆ. ಪ್ರಕಾಶ್ ಭಾರದ್ವಾಜ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!