Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಕಲಾಪ್ರವೀಣ ಪ್ರಶಸ್ತಿಗೆ ಆಯ್ಕೆ

ಕಲಾಪ್ರವೀಣ ಪ್ರಶಸ್ತಿಗೆ ಆಯ್ಕೆ

ಸುದ್ದಿಕಿರಣ ವರದಿ
ಸೋಮವಾರ, ಮೇ 2

ಕಲಾಪ್ರವೀಣ ಪ್ರಶಸ್ತಿಗೆ ಆಯ್ಕೆ
ಉಡುಪಿ: ರಾಗಧನ ಸಂಸ್ಥೆ ಉಡುಪಿ ಆಶ್ರಯದಲ್ಲಿ ಕಲಾವಿಹಾರಿ ಎ. ಈಶ್ವರಯ್ಯ ಸ್ಮರಣಾರ್ಥ ಅವರ ಕುಟುಂಬದವರು ನೀಡುವ ಈ ವರ್ಷದ ಕಲಾಪ್ರವೀಣ ಪ್ರಶಸ್ತಿಗೆ ಖ್ಯಾತ ಹಿರಿಯ ವಿಮರ್ಶಕ, ಸಾಹಿತಿ ಬೆಂಗಳೂರಿನ ಎಸ್. ದಿವಾಕರ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ 10 ಸಾವಿರ ನಗದು ಒಳಗೊಂಡಿದೆ. ಮೇ 15ರಂದು ಅಪರಾಹ್ನ 3 ಗಂಟೆಗೆ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಸಭಾಂಗಣದಲ್ಲಿ ಅಂಕಣಕಾರ, ಸಾಹಿತಿ ಪ್ರೊ. ಮುರಲೀಧರ ಉಪಾಧ್ಯ ಹಿರಿಯಡ್ಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಿಕ್ಷಣ ತಜ್ಞ ಹಾಗೂ ಸಾಹಿತಿ ಡಾ| ಮಹಾಬಲೇಶ್ವರ ರಾವ್ ಅಭಿನಂದನಾ ಭಾಷಣ ಮಾಡಲಿದ್ದಾರೆ.

ನಂತರ ಬೆಂಗಳೂರಿನ ಅದಿತಿ ಪ್ರಹ್ಲಾದ್ ಸಂಗೀತ ಕಛೇರಿ ನಡೆಯಲಿದೆ. ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಡಾ| ಬಾಲಚಂದ್ರ ಆಚಾರ್ ಸಹಕರಿಸಲಿದ್ದಾರೆ ಎಂದು ರಾಗಧನ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!