Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕೃಷ್ಣಮಠದಲ್ಲಿ ಸಾಧಕರಿಗೆ ಸನ್ಮಾನ

ಕೃಷ್ಣಮಠದಲ್ಲಿ ಸಾಧಕರಿಗೆ ಸನ್ಮಾನ

ಉಡುಪಿ: ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆಯುತ್ತಿರುವ ಪರ್ಯಾಯ ಪಂಚಶತಮಾನೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.

ಉಡುಪಿಯ ಹಿರಿಯ ಲೆಕ್ಕಪರಿಶೋಧಕ ಯು. ಕೆ. ಮಯ್ಯ, ವಿದ್ವಾಂಸ ಭಾರತೀಶ ಬಲ್ಲಾಳ, ಉದ್ಯಮಿ ಪದ್ಮನಾಭ ಭಟ್, ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬೆಳ್ಳಿಪಾಡಿ ಹರಿಪ್ರಸಾದ್ ರೈ, ಉಡುಪಿ ಟೌನ್ ಕೋ- ಆಪರೇಟಿವ್ ಬ್ಯಾಂಕಿನ ನಿವೃತ್ತ ಮಹಾಪ್ರಬಂಧಕ ಬಿ. ವಿ. ಲಕ್ಷ್ಮೀನಾರಾಯಣ ಅವರನ್ನು ಪರ್ಯಾಯ ಶ್ರೀ ಅದಮಾರು ಈಶಪ್ರಿಯತೀರ್ಥ ಶ್ರೀಪಾದರು ಸನ್ಮಾನಿಸಿದರು.

ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ| ಜಗದೀಶ ಶೆಟ್ಟಿ ಅಭ್ಯಾಗತರಾಗಿದ್ದರು.

 

ಪುತ್ತಿಗೆ, ಕಾಣಿಯೂರು ಮಠ ಮಾಹಿತಿ
ಈ ಸಂದರ್ಭದಲ್ಲಿ ಆಯೋಜಿಸಲಾಗಿರುವ ಅಷ್ಟಮಠಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಪರಂಪರೆಯ ಬಗ್ಗೆ ಸುನಿಲ ಆಚಾರ್ಯ ಮತ್ತು ಪ್ರಸನ್ನ ಆಚಾರ್ಯ ಮಾಹಿತಿ ನೀಡಿದರು. ಪುತ್ತಿಗೆ ಮಠದ ಪರ್ಯಾಯ ವೈಭವವನ್ನು ನೆನಪಿಸಿದರು.

ವಿದ್ವಾನ್ ಹೃಷಿಕೇಶ ಮಠದ ಅವರು ಕಾಣಿಯೂರು ಮಠ ಪರಂಪರೆ ಬಗ್ಗೆ ಮತ್ತು ಪ್ರೊ. ವೇಣುಗೋಪಾಲ ರಾವ್ ಅವರು ಕಾಣಿಯೂರು ಮಠ ಪರ್ಯಾಯದ ಬಗ್ಗೆ ತಿಳಿಸಿದರು.

ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಸಂಗೀತ ಕಛೇರಿ
ಬಳಿಕ ರಾಜಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆನ್ನೈನ ಅಭಿಷೇಕ್ ರಘುರಾಮ್ ಮತ್ತು ವೃಂದದವರಿಂದ ಸಂಗೀತ ಕಛೇರಿ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!