Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಸಂವಿಧಾನ ಉಳಿಸಿಕೊಳ್ಳುವ ಸಂಕಲ್ಪ ಅಗತ್ಯ

ಸಂವಿಧಾನ ಉಳಿಸಿಕೊಳ್ಳುವ ಸಂಕಲ್ಪ ಅಗತ್ಯ

ಉಡುಪಿ: ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ಅಂಗೀಕರಿಸುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ನೆಲೆಯಾಗಿದ್ದು, ಈ ಸಂವಿಧಾನವನ್ನು ಉಳಿಸಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಗಾಂಧಿ ಚೌಕದಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸೇವಾದಳ ಸಂಯುಕ್ತವಾಗಿ ಹಮ್ಮಿಕೊಂಡ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಈಚಿನ ದಿನಗಳಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯ ಬಂದೊದಗಿದೆ. ದೇಶದಲ್ಲಿರುವ ಶೇ. 80ರಷ್ಟು ರೈತರು ತಮ್ಮ ಬೇಡಿಕೆಗಾಗಿ ರಸ್ತೆಯಲ್ಲಿ ಕಳೆದ 66 ದಿನದಿಂದ ಪ್ರತಿಭಟನೆ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದೆ ಸರ್ವಾಧಿಕಾರಿ ಧೋರಣೆ ತಾಳುತ್ತಿದೆ. ದೇಶದ ಅನ್ನದಾತನ ಕೂಗಿಗೆ ಕೇಂದ್ರ ಬೆಲೆ ನೀಡದಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೇಂದ್ರ ಸರ್ಕಾರ ರೈತರ ಬೇಡಿಕೆಯನ್ನು ಸಹಾನುಭೂತಿಯಿಂದ ಆಲಿಸುವ ಬದಲು ಚಳುವಳಿಯನ್ನು ಹತ್ತಿಕ್ಕಲು ಷಡ್ಯಂತ್ರ ರೂಪಿಸುತ್ತಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಜೆಗಳ ಮಾತಿಗೆ ಬೆಲೆ ಬರಬೇಕು ಎಂದರು.

ಪಕ್ಷ ಪ್ರಮುಖರಾದ ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭಾಸ್ಕರ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಅಣ್ಣಯ್ಯ ಶೇರಿಗಾರ್, ಜ್ಯೋತಿ ಹೆಬ್ಬಾರ್, ಪ್ರಶಾಂತ್ ಜತ್ತನ್ನ, ಉದ್ಯಾವರ ನಾಗೇಶ್ ಕುಮಾರ್, ಜನಾರ್ದನ ಭಂಡಾರ್ಕಾರ್, ದಿನಕರ್ ಹೇರೂರು, ಬಾಲಕೃಷ್ಣ ಪೂಜಾರಿ, ಕಿಶೋರ್ ಎರ್ಮಾಳ್, ಕೃಷ್ಣ ಹೆಬ್ಬಾರ್, ಲೂಯಿಸ್ ಲೋಬೊ, ಸೇವಾದಳದ ಶರತ್ ನಾಯ್ಕ್ ಕುಕ್ಕೆಹಳ್ಳಿ, ಅರುಣ್ ಯು. ಜಿ. ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!