ಸುದ್ದಿಕಿರಣ ವರದಿ
ಸೋಮವಾರ, ಮೇ 30
ಶಿಲ್ಪಾ ಆತ್ಮಹತ್ಯೆ ಪ್ರಕರಣ ಆರೋಪಿ ಅಜೀಜ್ ಬಂಧನ
ಉಡುಪಿ: ಕುಂದಾಪುರ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾರೆ ಎನ್ನಲಾದ ಇಬ್ಬರು ಆರೋಪಿಗಳ ಪೈಕಿ ಅಜೀಜ್ ಎಂಬಾತನನ್ನು ಕುಂದಾಪುರ ಪೋಲಿಸರ ತಂಡ ಬಂಧಿಸಿದೆ.
ಅಜೀಜ್ ಬಂಧನವನ್ನು ಎಸ್.ಪಿ. ಎನ್. ವಿಷ್ಣುವರ್ಧನ್ ಖಚಿತಪಡಿಸಿದ್ದಾರೆ.
ಅಜೀಜ್ ಪ್ರೇಮ ಪಾಶಕ್ಕೆ ಸಿಲುಕಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಅಜೀಜ್ ಮತ್ತು ಆತನ ಪತ್ನಿ ಸಲ್ಮಾ ಕಾರಣ ಎಂದು ಆರೋಪಿಸಿ ಕುಂದಾಪುರ ಠಾಣೆಯಲ್ಲಿ ಮೇ 25ರಂದು ಪ್ರಕರಣ ದಾಖಲಾಗಿತ್ತು.
ತನ್ನ ತಂಗಿಗೆ ಲೈಂಗಿಕವಾಗಿ ಕಿರುಕುಳ ನೀಡಿ ಇಸ್ಲಾಂ ಮತಕ್ಕೆ ಮತಾಂತರವಾಗುವಂತೆ ಬಲವಂತ ಮಾಡಲಾಗಿತ್ತು ಎಂದು ಶಿಲ್ಪಾ ಸಹೋದರ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದರು.
ಲವ್ ಜಿಹಾದ್ ಗೆ ಶಿಲ್ಪಾ ಬಲಿಯಾಗಿದ್ದು, ಪ್ರಕರಣ ತನಿಖೆಯನ್ನು ಸಿಐಡಿಗೊಪ್ಪಿಸಬೇಕು ಹಾಗೂ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ತಪ್ಪಿದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ಎಚ್ಚರಿಕೆ ನೀಡಿತ್ತು.