Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಮಲಕಾನಿಕರೇಶ್ವರ ರಾಜಗೋಪುರ ಕಾಮಗಾರಿ ವೀಕ್ಷಣೆ

ಮಲಕಾನಿಕರೇಶ್ವರ ರಾಜಗೋಪುರ ಕಾಮಗಾರಿ ವೀಕ್ಷಣೆ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 12

ಮಲಕಾನಿಕರೇಶ್ವರ ರಾಜಗೋಪುರ ಕಾಮಗಾರಿ ವೀಕ್ಷಣೆ
ಶೃಂಗೇರಿ: ಇಲ್ಲಿನ ಇತಿಹಾಸ ಪ್ರಸಿದ್ಧ ಮಲ್ಲಿಕಾರ್ಜುನ ಬೆಟ್ಟದ ಶ್ರೀ ಮಲಹಾನಿಕರೇಶ್ವರ ದೇವಾಲಯದಲ್ಲಿ ನಿರ್ಮಿಸಲಾಗುತ್ತಿರುವ ರಾಜಗೋಪುರ ನಿರ್ಮಾಣ ಕಾಮಗಾರಿಯನ್ನು ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ವೀಕ್ಷಿಸಿದರು.

ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಆಶಯದಂತೆ 65 ಅಡಿ ಎತ್ತರದ ರಾಜಗೋಪುರ ನಿರ್ಮಾಣವಾಗುತ್ತಿದ್ದು, ಅದರ ಭೂಮಿಪೂಜೆ ಈಚೆಗೆ ನಡೆದ ಜಗದ್ಗುರುಗಳವರ ವರ್ಧಂತಿ ಮಹೋತ್ಸವ ಸಂದರ್ಭದಲ್ಲಿ ನಡೆಸಲಾಗಿತ್ತು.

ಸಂಪ್ರದಾಯದಂತೆ ಚಾತುರ್ಮಾಸ್ಯ ವ್ರತ ದೀಕ್ಷೆಗೂ ಮುನ್ನ ಸೋಮವಾರ ಉಭಯ ಜಗದ್ಗುರುಗಳವರು ಶ್ರೀಮಲಹಾನಿಕರೇಶ್ವರಸ್ವಾಮಿ ದೇಗುಲಕ್ಕೆ ಆಗಮಿಸಿ, ಶ್ರೀದೇವರ ದರ್ಶನ ಪಡೆದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!