Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರ ನಾಗಾಲಯಕ್ಕೆ ರಜತದ್ವಾರ ಸಮರ್ಪಣೆ

ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರ ನಾಗಾಲಯಕ್ಕೆ ರಜತದ್ವಾರ ಸಮರ್ಪಣೆ

ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರ ನಾಗಾಲಯಕ್ಕೆ ರಜತದ್ವಾರ ಸಮರ್ಪಣೆ

(ಸುದ್ದಿಕಿರಣ ವರದಿ)
ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಪವಮಾನ ಪಾರಾಯಣ ಸೂಕ್ತ ಸಹಿತ ತನು ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಿತು.

ನಾಗರಪಂಚಮಿ ಪರ್ವಕಾಲದಲ್ಲಿ ಕ್ಷೇತ್ರದಿಂದ ಕ್ಷೇಮಗೊಂಡ ಅನಿವಾಸಿ ಭಾರತೀಯ ಉದ್ಯಮಿ ಜಗನ್ನಾಥ ಶೆಟ್ಟಿ ಮತ್ತು ಮಕ್ಕಳು ಕ್ಷೇತ್ರದ ನಾಗಾಲಯದ ಮುಖದ್ವಾರಕ್ಕೆ ಕೊಡುಗೆಯಾಗಿ ನೀಡಿದ ರಜತ ಕವಚವನ್ನು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ಸಮಸ್ತ ಭಕ್ತರ ಸಮಕ್ಷಮದಲ್ಲಿ ಕ್ಷೇತ್ರದ ಅರ್ಚಕ ಗಜಾನನ ಭಟ್ ಭಟ್ ಪೌರೋಹಿತ್ಯದಲ್ಲಿ ಸಮರ್ಪಿಸಿ ನಾಗರಾಜ- ನಾಗರಾಣಿಯರ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಅಲಂಕಾರ ತಜ್ಞ ಆನಂದ ಬಾಯಿರಿ, ಸಹಅರ್ಚಕ ಸ್ವಸ್ತಿಕ ಆಚಾರ್ಯ ಇದ್ದರು.

ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಹಾಗೂ ನಾಗರಾಜ ಆಚಾರ್ಯ ಕಾರ್ಯಕ್ರಮ ಸಂಯೋಜಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!