ಸಂತೆಕಟ್ಟೆ: ರಿಕ್ಷಾ ಚಾಲಕರಿಂದ ಗೀತ ಗಾಯನ
(ಸುದ್ದಿಕಿರಣ ವರದಿ)
ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಮಾತಾಡು ಮಾತಾಡು ಕನ್ನಡ ಅಭಿಯಾನ ಅಂಗವಾಗಿ ವಿಶ್ವದಾದ್ಯಂತ ಏಕಕಾಲದಲ್ಲಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ನಡೆಯುತ್ತಿದ್ದು, ಗುರುವಾರ ಕಲ್ಯಾಣಪುರ ಸಂತೆಕಟ್ಟೆ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ಕನ್ನಡ ಹಾಡುಗಳನ್ನು ಹಾಡಿ ಅಭಿಯಾನದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಉಡುಪಿ ಎ.ಪಿ.ಎಂ.ಸಿ ನಾಮನಿರ್ದೇಶಿತ ಸದಸ್ಯ ಉಮೇಶ್ ಶೆಟ್ಟಿ, ಸಂತೆಕಟ್ಟೆ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಂತೆಕಟ್ಟೆ ಶಾಖಾ ಮುಖ್ಯಸ್ಥ ರಾಜೇಂದ್ರ ಯು, ಸಂತೆಕಟ್ಟೆ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಜಯರಾಮ್, ಸ್ಥಳೀಯರಾದ ಉದಯ ನಯಂಪಳ್ಳಿ ಮೊದಲಾದವರಿದ್ದರು