ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಅಧೀನ ಸಂಸ್ಥೆಗಳಲ್ಲೊಂದಾದ ವೆಲ್ ಕಮ್ ಗ್ರೂಪ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿಸ್ಟ್ರೇಷನ್ ನ ಅಸೋಸಿಯೇಟ್ ಪ್ರೊಫೆಸರ್ ಶ್ರೀಲತಾ ರಾವ್ ಮಂಡಿಸಿದ ಮಹಾಪ್ರಬಂಧಕ್ಕೆ ಭಾರತೀಯಾರ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಲಭಿಸಿದೆ.
ಇಂದ್ರಾಳಿ ರಾಮಚಂದ್ರ ರಾವ್ ಹಾಗೂ ಶಾರದಾ ದಂಪತಿ ಪುತ್ರಿ ಹಾಗೂ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ವಿ. ಜಿ. ಬೈಕಾಡಿ ಪತ್ನಿಯಾಗಿರುವ ಶ್ರೀಲತಾ ಅವರು ಡಾ| ಗೀತಾ ಹೆಗ್ಡೆ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು