ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 11, 2022
ಕೆಎಂಸಿ ಪ್ರಾಧ್ಯಾಪಕ ಡಾ. ಸತೀಶ್ ಅಡಿಗ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ
ಮಣಿಪಾಲ: ಇಲ್ಲಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಭ್ರೂಣಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಸತೀಶ್ ಅಡಿಗ ಅವರನ್ನು 2020ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಆಯ್ಕೆ ಮಾಡಿದೆ.
ಐಸಿಎಂಆರ್ ತನ್ನ ವೆಬ್ ಸೈಟ್ ನಲ್ಲಿ ಈ ವಿಚಾರ ಪ್ರಕಟಿಸಿದ್ದು, ಪ್ರೊ. ಅಡಿಗ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಐಸಿಎಂಆರ್.ನಿಂದ ಡಾ. ಸುಭಾಸ್ ಮುಖರ್ಜಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಡಾ. ಸುಭಾಸ್ ಮುಖರ್ಜಿ ಭಾರತದ ಮೊದಲ ಐವಿಎಫ್ ಮಗುವಿನ ಸೃಷ್ಟಿಕರ್ತರು. ಆದ್ದರಿಂದ ಐಸಿಎಂಆರ್, ದೇಶದ ಐವಿಎಫ್ ತಜ್ಞರ ಅತ್ಯುತ್ತಮ ಕೊಡುಗೆ ಗುರುತಿಸಲು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ ಎಂದು ಪ್ರಕಟಿಸಿದೆ.
ಡಾ. ಅಡಿಗ, ಕೆಎಂಸಿ ಮಣಿಪಾಲದಲ್ಲಿ ಸಹಕರಿತ ಸಂತಾನೋತ್ಪತ್ತಿ ಚಿಕಿತ್ಸೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ ಮತ್ತು ಕ್ಲಿನಿಕಲ್ ಐವಿಎಫ್ ಮತ್ತು ಸಂಶೋಧನೆ ಕ್ಷೇತ್ರಕ್ಕೂ ಗಣನೀಯ ಕೊಡುಗೆ ನೀಡಿದ್ದಾರೆ