Monday, July 4, 2022
Home ಲೋಕಾಭಿರಾಮ ರ್ಯಾಂಕ್ ವಿಜೇತೆಗೆ ಅಭಿನಂದನೆ

ರ್ಯಾಂಕ್ ವಿಜೇತೆಗೆ ಅಭಿನಂದನೆ

ರ್ಯಾಂಕ್ ವಿಜೇತೆಗೆ ಅಭಿನಂದನೆ

(ಸುದ್ದಿಕಿರಣ ವರದಿ)
ಶಿರ್ವ: ಶತಮಾನೋತ್ಸವ ಹೊಸ್ತಿಲಲ್ಲಿರುವ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಪಡುಬೆಳ್ಳೆ ವಿಜಯಾ ಹೋಮ್ ಇಂಡಸ್ಟ್ರೀಸ್ ಮಾಲಕ ರಾಮಚಂದ್ರ ನಾಯಕ್ ರಾಷ್ಟ್ರಧ್ವಜ ಅರಳಿಸಿ ಸಂದೇಶ ನೀಡಿದರು.

ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಜಯರಾಮ ಪ್ರಭು ಗಂಪದಬೈಲು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ. ಆರ್. ಪಾಟ್ಕರ್, ಉಪಾಧ್ಯಕ್ಷೆ ಗ್ರೇಸಿ ಕರ್ಡೋಜ, ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಕಾರ್ಯಕ್ರಮ ಪ್ರಾಯೋಜಕ ರಾಮಚಂದ್ರ ನಾಯಕ್, ಆರ್.ಎಸ್.ಬಿ ಯುವೃಂದ ಅಧ್ಯಕ್ಷೆ ಶ್ರಾವ್ಯಾ ನಾಯಕ್, ಮಹಿಳಾ ವೃಂದ ಅಧ್ಯಕ್ಷೆ ಶೋಭಾ ಪಾಟ್ಕರ್, ಶ್ರೀದುರ್ಗಾ ಮಹಿಳಾ ಚಂಡೆ ಬಳಗ ಅಧ್ಯಕ್ಷೆ ಗೀತಾ ವಾಗ್ಲೆ, ಶಾಲಾ ಹಳೆ ವಿದ್ಯಾರ್ಥಿ ಡಾ. ಕೇಶವ ಪಾಟ್ಕರ್, ಆಡಳಿತ ಮಂಡಳಿ ಸದಸ್ಯ ಕೇಂಜ ವಿಶ್ವನಾಥ ನಾಯಕ್, ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ 2020- 21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್ಯಾಂಕ್ ಗಳಿಸಿದ ಶಾಲಾ ಹಳೆವಿದ್ಯಾರ್ಥಿನಿ ಶ್ರಾವ್ಯಾ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಲಾವಣ್ಯವತಿ ಸ್ವಾಗತಿಸಿದರು. ಶಿಕ್ಷಕಿಯರಾದ ಅಶ್ವಿನಿ ಪರಿಚಯಿಸಿದರು. ವಿನುತಾ ಪ್ರಾರ್ಥಿಸಿದರು. ಸಂಗೀತಾ ಪಾಟ್ಕರ್ ದೇಶಭಕ್ತಿ ಗೀತೆ ಹಾಡಿ, ಕಾರ್ಯಕ್ರಮ ನಿರೂಪಿಸಿದರು. ಸುಮತಿ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!