ಸುದ್ದಿಕಿರಣ ವರದಿ
ಶುಕ್ರವಾರ, ಜನವರಿ 14, 2022
ವೈದ್ಯಕೀಯ ತಪಾಸಣೆ ಶಿಬಿರಕ್ಕೆ ಚಾಲನೆ
ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಉಡುಪಿಗೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರಿಗಾಗಿ ಕೃಷ್ಣಮಠ ಆವರಣದ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿ ಜ.14ರಿಂದ 18ರ ವರೆಗೆ ನಿರಂತರ 24 ಗಂಟೆಗಳ ನಡೆಯುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಮಕರ ಸಂಕ್ರಾಂತಿ ಶುಭದಿನದಂದು ಶುಕ್ರವಾರ ಚಾಲನೆ ನೀಡಲಾಯಿತು.
ಪರ್ಯಾಯ ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ರವಿಚಂದ್ರ ರಾವ್ ಉಚ್ಚಿಲ, ಡಾ. ಸತೀಶ್ ರಾವ್, ಡಾ. ಜಯಂತ್, ಡಾ. ಸ್ವಾತಿ, ಡಾ. ವಿಜಯ್ ನೆಗಳೂರು, ಪತ್ರಕರ್ತ ಜಯಪ್ರಕಾಶ್ ಕಿಣಿ, ವೈದ್ಯಕೀಯ ಪ್ರತಿನಿಧಿ ರಾಘವೇಂದ್ರ ಪ್ರಭು ಕರ್ವಾಲು ಮೊದಲಾದವರಿದ್ದರು.