Saturday, July 2, 2022
Home ಲೋಕಾಭಿರಾಮ ಆರಂಬ ಸಗ್ರಿಯಲ್ಲಿ `ಕೆಸರು ಗದ್ದೆಯಲ್ಲಿ ಒಂದು ದಿನ'

ಸಗ್ರಿಯಲ್ಲಿ `ಕೆಸರು ಗದ್ದೆಯಲ್ಲಿ ಒಂದು ದಿನ’

ಉಡುಪಿ: ನಮ್ಮೂರ ಗೆಳೆಯರ ಬಳಗ ಸಗ್ರಿ ಇವರ ವತಿಯಿಂದ ಈಚೆಗೆ ಕೆಸರು ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ನಡೆಸಲಾಯಿತು. ಆ ಮೂಲಕ ಸತತ 6 ವರ್ಷದಿಂದ ನಡೆಸಿಕೊಂಡು ಬರುತ್ತಿರುವ ನಾಟಿಯನ್ನು ಸುಮಾರು 3 ಎಕ್ರೆ ವಿಸ್ತೀರ್ಣದ ನಮ್ಮೂರ ಗದ್ದೆಯಲ್ಲಿ ನಡೆಸಲಾಯಿತು.

ಬಳಗದ ಗೌರವಾಧ್ಯಕ್ಷ ಮುರಳೀಧರ ಭಟ್ ಭೂಮಿಗೆ ಹಾಲೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಗದ ಅಧ್ಯಕ್ಷ ಹರೀಶ್ ಭಾರದ್ವಾಜ್ ಸ್ವಾಗತಿಸಿದರು.

ಊರವರು ಹಾಗೂ ಅಭಿಮಾನಿಗಳ ಸಹಕಾರದಿಂದ ನಾಟಿ ಕಾರ್ಯ ಯಶಸ್ವಿಯಾಯಿತು.

ಕೊರೊನಾ ಮಾರ್ಗಸೂಚಿ ಅನುಸರಿಸಿ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಕ್ರೀಡೆ, ಆಟೋಟ ನಡೆಸದೆ ಕೇವಲ ನಾಟಿಗೆ ಸೀಮಿತಗೊಳಿಸಲಾಯಿತು.

ಬಳಗದ ಗೌರವ ಸಲಹೆಗಾರರಾದ ಉಮೇಶ್ ನಾಯಕ್ ಮತ್ತು ಸದಾನಂದ ನಾಯಕ್ ಹಾಗೂ ಸರ್ವ ಸದಸ್ಯರು ಇದ್ದರು.

ಉದಯ್ ಕುಮಾರ್ ಕುಂಡೆಲು ನಿರೂಪಿಸಿ, ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!