Thursday, July 7, 2022
Home ಲೋಕಾಭಿರಾಮ ಆರಂಬ ಪಾಳುಭೂಮಿ ಹಸಿರಾಗಿಸುವುದು ದೇವಪ್ರೀತಿಯ ಕಾರ್ಯ

ಪಾಳುಭೂಮಿ ಹಸಿರಾಗಿಸುವುದು ದೇವಪ್ರೀತಿಯ ಕಾರ್ಯ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
********************************

(ಸುದ್ದಿಕಿರಣ ವರದಿ)

ಉಡುಪಿ, ಜು. 5: ಪಾಳು ಬಿದ್ದಿರುವ ಕೃಷಿಯೋಗ್ಯ ಭೂಮಿಯನ್ನು ಹಸಿರಾಗಿಸುವುದು ದೇವರು ಮೆಚ್ಚುವ ಕೆಲಸ ಎಂದು ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಗುಂಡಿಬೈಲು ವಾರ್ಡಿನಲ್ಲಿ 5 ಎಕರೆ ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡಲಾಗುತ್ತಿದ್ದು, ಸೋಮವಾರ ಭೂಮಿಗೆ ಹಾಲೆರೆಯುವ ಮೂಲಕ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಸಕ ರಘುಪತಿ ಭಟ್, ಉದ್ಯಮಿಗಳಾದ ಶೇಖರ್ ಜತ್ತನ್, ಪ್ರಕಾಶ್ ಶೆಟ್ಟಿ, ಪ್ರಭಾಕರ ಭಟ್ ಅಭ್ಯಾಗತರಾಗಿದ್ದರು.

ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಹಿರಿಯ ಕೃಷಿಕ ರಾಘವೇಂದ್ರ ಭಟ್, ಗುರ್ಕಾರ ಸಂಜೀವ ಜತ್ತನ್, ಸ್ಥಳೀಯರಾದ ರಾಜೀವ ಶೆಟ್ಟಿ, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!