Monday, July 4, 2022
Home ಲೋಕಾಭಿರಾಮ ಆರಂಬ ಕೃಷಿ ಉದ್ಯಮಕ್ಕಿದೆ ಉತ್ತಮ ಭವಿಷ್ಯ

ಕೃಷಿ ಉದ್ಯಮಕ್ಕಿದೆ ಉತ್ತಮ ಭವಿಷ್ಯ

ಉಡುಪಿ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲವೂ ಸ್ತಬ್ಧವಾಗಿದ್ದಾಗ ರೈತ ಮಾತ್ರ ಚಟುವಟಿಕೆಯಿಂದಿದ್ದು ದೇಶದ ಏಳಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿರುವುದು, ಭವಿಷ್ಯದಲ್ಲಿ ಕೃಷಿ ಕ್ಷೇತ್ರದ ಉದ್ಯಮಕ್ಕೆ ಉಜ್ವಲ ಭವಿಷ್ಯ ಇದೆ ಎಂಬುದನ್ನು ಸೂಚಿಸುತ್ತದೆ ಎಂದು ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹೇಳಿದರು.

ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಈಚೆಗೆ ಪೆರಂಪಳ್ಳಿ ಫೆಡ್ರಿಕ್ ಡಿ’ಸೋಜಾ ಮನೆಯಂಗಳದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಮತ್ತು ಕೃಷಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ಪಡೆದು ಮುಂದುವರಿದಲ್ಲಿ ಬೇರಾವುದೇ ಉದ್ಯಮಕ್ಕಿಂತ ಹೆಚ್ಚಿನ ಆದಾಯ ಕೃಷಿಯಿಂದ ಪಡೆಯಲು ಸಾಧ್ಯವಿದೆ ಎಂದವರು ಹೇಳಿದರು.

ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು.

ಅಭ್ಯಾಗತರರಾಗಿದ್ದ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಕೃಷಿಕರಿಗೆ ಇಲಾಖೆಯಿಂದ ದೊರಕುವ ಸೌಲಭ್ಯಗಳ ಮಾಹಿತಿ ನೀಡಿದರು.

ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ ಮತ್ತು ಸೆಲಿನ್ ಕರ್ಕಡ, ಹಿರಿಯ ಕೃಷಿಕ ಶಂಕರ ಕೋಟ್ಯಾನ್ ಪೆರಂಪಳ್ಳಿ, ಕೃಷಿಕ ಸಂಘ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಇದ್ದರು.

ಈ ಸಂದರ್ಭದಲ್ಲಿ ಪೆರಂಪಳ್ಳಿ ವಲಯದ ಪ್ರಗತಿಪರ ಕೃಷಿಕರಾದ ಆಚಾರಿಬೆಟ್ಟು ಲೂವಿಸ್ ಡಿ’ಸೋಜಾ, ಶೀಂಬ್ರ ಕಮಲ ಪೂಜಾರಿ ಹಾಗೂ ಸೆಲಿನ್ ಡಿ’ಸಿಲ್ವ ಅವರನ್ನು ಸನ್ಮಾನಿಸಲಾಯಿತು.

ರೋಸಿ ಪಿಂಟೊ, ಪ್ರೇಮ ಪೂಜಾರಿ, ಹೇಮ ವಿಜಯಾ, ಜಯಂತಿ ಶಂಕರ್, ಪ್ರಮೀಳಾ ಜಯಂತಿ, ರಫೈಲ್, ಆಲ್ವಿನ್ ಡಿ’ಸೋಜಾ, ವಿನ್ಸೆಂಟ್, ಪೀಟರ್ ಡಿ’ಸೋಜಾ, ರವೀಂದ್ರನಾಥ ಶೆಟ್ಟಿ, ಬಾಬಣ್ಣ ಪುತ್ತೂರು, ರಾಜೀವಿ, ಶಾಂತಿ ಡಿ’ಸೋಜಾ, ಹೆಲೆನ್ ಬ್ರಿಟ್ಟೊ, ಅಕ್ಕಮ್ಮ, ಪ್ರೆಸಿಲ್ಲ, ಬೇಬಿ ಮೊದಲಾದವರಿದ್ದರು.

ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಪೂಜಾರಿ ಶೀಂಬ್ರ ನಿರೂಪಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!