Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಉಡುಪಿಯಲ್ಲಿ ಆಕಾಶ್ ಬೈಜೂಸ್ ತರಗತಿ ಕೇಂದ್ರ ಆರಂಭ

ಉಡುಪಿಯಲ್ಲಿ ಆಕಾಶ್ ಬೈಜೂಸ್ ತರಗತಿ ಕೇಂದ್ರ ಆರಂಭ

ಸುದ್ದಿಕಿರಣ ವರದಿ
ಗುರುವಾರ, ಮಾರ್ಚ್ 24

ಉಡುಪಿಯಲ್ಲಿ ಆಕಾಶ್ ಬೈಜೂಸ್ ತರಗತಿ ಕೇಂದ್ರ ಆರಂಭ
ಉಡುಪಿ: ಪರೀಕ್ಷಾ ತಯಾರಿ ಸೇವಾ ವಲಯದ ಮುಂಚೂಣಿ ತರಬೇತಿ ಸಂಸ್ಥೆ ಆಕಾಶ್ ಬೈಜೂಸ್ ಇಲ್ಲಿನ ಕುಂಜಿಬೆಟ್ಟಿನಲ್ಲಿ ಕಾರ್ಯಾರಂಭ ಮಾಡಿದೆ. ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸನ್ನದ್ಧವಾಗಿಸುವ ಕರ್ನಾಟಕದ 24ನೇ ಕೇಂದ್ರ ಇದಾಗಿದೆ ಎಂದು ಆಕಾಶ್ ಬೈಜೂಸ್ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ತಿಳಿಸಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರ್ಷಿಕ ಸುಮಾರು 2.75 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನೊಳಗೊಂಡು, 250ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಪರೀಕ್ಷಾ ತಯಾರಿ ಸೇವಾ ವಲಯದಲ್ಲಿ ಆಕಾಶ್ ಬೈಜೂಸ್, ರಾಷ್ಟ್ರ ಮಟ್ಟದಲ್ಲಿ ಮುಂಚೂಣಿ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ.

1988ರಲ್ಲಿ ದೆಹಲಿಯಲ್ಲಿ ಆರಂಭಗೊಂಡ ಸಂಸ್ಥೆ ಇದೀಗ ದೇಶವ್ಯಾಪಿ ಕೇಂದ್ರಗಳನ್ನು ಹೊಂದಿದೆ ಎಂದರು.

ಉಡುಪಿ- ಮಣಿಪಾಲ ರಸ್ತೆಯ ಕುಂಜಿಬೆಟ್ಟು ಎಂಜಿಎಂ ಕಾಲೇಜು ಸಮೀಪದ ಎವಿ ಆರ್ಕೇಡ್ ನ ಮೊದಲ ಮಹಡಿಯಲ್ಲಿ ಆರಂಭಗೊಂಡ ಆಕಾಶ್ ಬೈಜೂಸ್ ನ ಪ್ರಥಮ ತರಗತಿ ಕೇಂದ್ರ ಫೌಂಡೇಶನ್ ಮಟ್ಟದ ಕೋರ್ಸ್ ಗಳ ಜೊತೆಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತದೆ. ಕೇಂದ್ರದಲ್ಲಿ 5 ತರಗತಿ ಕೊಠಡಿಗಳಿದ್ದು, ಸುಮಾರು 300- 400 ಮಂದಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸುಮಾರು 100 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರಿಗೆ ಫೌಂಡೇಶನ್ ಮಟ್ಟದ ತರಬೇತಿ ನೀಡಿ ಉದಾಹರಣೆಗೆ ಒಲಂಪಿಯಾಡ್ ಗಳು ಇತ್ಯಾದಿಗಳ ಮೂಲಭೂತ ಅಂಶಗಳನ್ನು ಬಲಪಡಿಸಲು ನೆರವಾಗಲಿದೆ. ಗುಣಮಟ್ಟದ ಶಿಕ್ಷಕರ ತಂಡ ನಮ್ಮಲ್ಲಿದೆ ಎಂದು ಮಿಶ್ರಾ ಹೇಳಿದರು.

ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಚೌಧರಿ, ಆಕಾಶ್ ಬೈಜೂಸ್ ತನ್ನ ಪ್ಯಾನ್- ಇಂಡಿಯಾ ನೆಟ್ ವರ್ಕ್ ಕೇಂದ್ರಗಳ ಮೂಲಕ ದೇಶದಾದ್ಯಂತ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಹೆಸರು ಗಳಿಸಿದೆ. ಗುಣಮಟ್ಟ ಮತ್ತು ನಮ್ಮ ಬೋಧನಾ ವಿಧಾನಗಳ ಪರಿಣಾಮಕಾರಿತ್ವ ವಿದ್ಯಾರ್ಥಿಗಳ ಆಯ್ಕೆ ಸಂಖ್ಯೆಯಿಂದಲೇ ದೃಢಪಡುತ್ತದೆ. ಪದವಿಪೂರ್ವ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಅರ್ಹತೆ ಪಡೆಯಲು ಉದ್ದೇಶಿಸಿರುವ ವಿದ್ಯಾರ್ಥಿಗಳಿಗೆ ಆಕಾಶ್ ಬೈಜೂಸ್ ಉನ್ನತ ಆಯ್ಕೆಗಳಲ್ಲಿ ಒಂದನ್ನಾಗಿ ಮಾಡಿದೆ ಎಂದರು.

ಏರಿಯಾ ಬಿಸಿನೆಸ್ ಹೆಡ್ ವಿಶ್ವನಾಥ್ ಮಾತನಾಡಿ, ಆಕಾಶ್ ನಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ತ್ವರಿತ ಪ್ರವೇಶ ಹಾಗೂ ವಿದ್ಯಾರ್ಥಿ ವೇತನ ಪರೀಕ್ಷೆ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳನ್ನು ವಿವಿಧ ಪರೀಕ್ಷೆಗಳಿಗೆ ಸಮಗ್ರವಾಗಿ ಸಿದ್ಧಪಡಿಸಲಾಗುವುದು. ಜೊತೆಗೆ ಅಳವಡಿಸಿಕೊಂಡ ಬೋಧನಾ ವಿಧಾನ ಪರಿಕಲ್ಪನೆ ಮತ್ತು ಅಪ್ಲಿಕೇಶನ್ ಆಧಾರಿತ ಕಲಿಕೆ ಮೇಲೆ ಕೇಂದ್ರೀಕರಿಸುತ್ತದೆ. ಅದನ್ನೇ ಬ್ರ್ಯಾಂಡ್ ಆಗಿ ಪ್ರತ್ಯೇಕಿಸುತ್ತದೆ. ಆಕಾಶ್ ನಲ್ಲಿರುವ ಪರಿಣಿತ ಅಧ್ಯಾಪಕರು ವಿದ್ಯಾರ್ಥಿಗಳಿಗೆ ತಮ್ಮ ಗುರಿ ಸಾಧಿಸಲು ಸಹಾಯ ಮಾಡುವ ಆಧುನಿಕ ಮತ್ತು ಸಂವಾದಾತ್ಮಕ ಬೋಧನಾ ವಿಧಾನ ಅನುಸರಿಸುತ್ತಾರೆ ಎಂದರು.

ಆಕಾಶ್ ಬೈಜೂಸ್ ಉಪನಿರ್ದೇಶಕ ಆರ್. ವಿ. ಎಸ್. ನಾರಾಯಣಮೂರ್ತಿ ಜಾಮಿ, ಉಡುಪಿ ಶಾಖೆ ಮುಖ್ಯಸ್ಥ ವಿಮರ್ಶ್ ಎಸ್. ಶೆಟ್ಟಿ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!