Thursday, July 7, 2022
Home ಲೋಕಾಭಿರಾಮ ಎಸ್.ಎಸ್.ಎಲ್.ಸಿ. ಫಲಿತಾಂಶ: ಒಬ್ಬ ವಿದ್ಯಾರ್ಥಿ ಫೇಲ್

ಎಸ್.ಎಸ್.ಎಲ್.ಸಿ. ಫಲಿತಾಂಶ: ಒಬ್ಬ ವಿದ್ಯಾರ್ಥಿ ಫೇಲ್

ಎಸ್.ಎಸ್.ಎಲ್.ಸಿ. ಫಲಿತಾಂಶ: ಒಬ್ಬ ವಿದ್ಯಾರ್ಥಿ ಫೇಲ್

(ಸುದ್ದಿಕಿರಣ ವರದಿ)
ಬೆಂಗಳೂರು: ಕೋವಿಡ್ ಕಾರಣದಿಂದ ಈ ಬಾರಿ ನಡೆದ ವಿಭಿನ್ನವಾಗಿ ನಡೆಸಲಾದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈಚೆಗೆ ನಡೆದ ಸರಳ ಮಾದರಿಯ ಪರೀಕ್ಷೆ ಫಲಿತಾಂಶವನ್ನು ಸೋಮವಾರ ನೂತನ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಪ್ರಕಟಿಸಿದರು.

ಕೋವಿಡ್ ಸಮಯದಲ್ಲಿ ಪರೀಕ್ಷೆ ಬರೆದ ಎಲ್ಲರನ್ನೂ ಪಾಸ್ ಮಾಡುವುದಾಗಿ ಈ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದರು. ಅದರಂತೆ, ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಎಲ್ಲರನ್ನೂ ಪಾಸ್ ಮಾಡಲಾಗಿದೆ ಎಂದರು. ಶೇ. 99.9 ಫಲಿತಾಂಶ ಬಂದಿದೆ.

ತನ್ನ ಬದಲಿಗೆ ಮತ್ತೋರ್ವ ವಿದ್ಯಾರ್ಥಿಯಿಂದ ಪರೀಕ್ಷೆ ಬರೆಸಿದ್ದ ಓರ್ವ ವಿದ್ಯಾರ್ಥಿ ನಪಾಸಾಗಿದ್ದಾನೆ ಎಂದು ಸಚಿವ ನಾಗೇಶ್ ತಿಳಿಸಿದರು.

ಎ ಪ್ಲಸ್ ಗ್ರೇಡ್ ನಲ್ಲಿ 1,28,931 ವಿದ್ಯಾರ್ಥಿಗಳು ಪಾಸಾಗಿದ್ದರೆ, ಎ ಗ್ರೇಡ್ ನಲ್ಲಿ 2,50,317 ಮಂದಿ ಪಾಸಾಗಿದ್ದಾರೆ. ಬಿನಲ್ಲಿ 2,87,684 ವಿದ್ಯಾರ್ಥಿಗಳು, ಸಿ ಗ್ರೇಡ್ ನಲ್ಲಿ 1,13,610 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅದರಲ್ಲಿ ಶೇ.9ರಷ್ಟು ಮಂದಿ ವಿದ್ಯಾರ್ಥಿಗಳು ಕೃಪಾಂಕ ಪಡೆದು ಪಾಸ್ ಆಗಿದ್ದಾರೆ. 13 ಮಂದಿಗೆ ವಿಷಯವೊಂದಕ್ಕೆ ಗರಿಷ್ಟ 28 ಕೃಪಾಂಕ ನೀಡಿ ಪಾಸ್ ಮಾಡಲಾಗಿದೆ.

157 ಮಕ್ಕಳು 625ಕ್ಕೆ 625 ಅಂಕ ಪಡೆದಿದ್ದಾರೆ. 289 ವಿದ್ಯಾರ್ಥಿಗಳು 625ಕ್ಕೆ 623 ಅಂಕ ಪಡೆದಿದ್ದರೆ, ಇಬ್ಬರಿಗೆ 622 ಅಂಕ ಸಿಕ್ಕಿದೆ. 621 ಅಂಕವನ್ನು 449 ಮಂದಿ ವಿದ್ಯಾರ್ಥಿಗಳು ಪಡೆದಿದ್ದಾರೆ. 28 ಮಂದಿಗೆ 620 ಅಂಕ ಲಭಿಸಿದೆ ಎಂದು ಸಚಿವ ಬಿ. ಸಿ. ನಾಗೇಶ್ ವಿವರಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!