Thursday, July 7, 2022
Home ಲೋಕಾಭಿರಾಮ ಚರಕ ಸಂಭಾಷಾ ಸಂಹಿತಾ ಪಠಣ ಕಾರ್ಯಕ್ರಮ

ಚರಕ ಸಂಭಾಷಾ ಸಂಹಿತಾ ಪಠಣ ಕಾರ್ಯಕ್ರಮ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯುರ್ವೇದದ ಪಿತಾಮಹ ಚರಕ ಜಯಂತಿ ಪ್ರಯುಕ್ತ ಚರಕ ಸಂಭಾಷಾ ಸಂಹಿತಾ ಪಠಣ ಕಾರ್ಯಕ್ರಮ ಕರ್ನಾಟಕ ವಿಶ್ವ ಆಯುರ್ವೇದ ಪರಿಷತ್ ಆಯುಷ್ ವಿಭಾಗ ಹಾಗೂ ಮೈಸೂರು ಸರಕಾರಿ ಆಯುರ್ವೇದ ಸಂಶೋಧನ ಕೇಂದ್ರ ಸಹಭಾಗಿತ್ವದೊಂದಿಗೆ ನಡೆಯಿತು.

ಕೋವಿಡ್ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ನಡೆದ ಕಾರ್ಯಕ್ರಮವನ್ನು ನವದೆಹಲಿ ಎನ್.ಸಿ.ಐ.ಎಸ್.ಎಂ ಆಯುರ್ವೇದ ಬೋರ್ಡ್ ಅಧ್ಯಕ್ಷ ಡಾ. ಬಿ. ಎಸ್. ಪ್ರಸಾದ್ ಉದ್ಘಾಟಿಸಿದರು.

ಸಂಹಿತಾವನ್ನು ಅರ್ಥಮಾಡಿಕೊಂಡು ಅಧ್ಯಯನ ಮಾಡುವುದು ಅತ್ಯಗತ್ಯ. ಆ ಪ್ರಯುಕ್ತ ಪ್ರಸಕ್ತ ಸಂಹಿತಾ ಪಠಣ ಮತ್ತು ವ್ಯಾಖ್ಯಾನ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ತಿಳಿಸಿದರು.

ಅಭ್ಯಾಗತರಾಗಿದ್ದ ಬೆಂಗಳೂರು ಆರ್.ಜಿ.ಯು.ಎಚ್.ಎಸ್. ಉಪಕುಲಪತಿ ಡಾ. ಜಯಕರ ಶೆಟ್ಟಿ, ಚರಕ ಸಂಹಿತೆ ವಿದ್ಯಾರ್ಥಿಗಳು ಆಯುರ್ವೇದ ಅರಿಯಲು ಸಹಕಾರಿ ಎಂದರು.

ಮತ್ತೋರ್ವ ಅತಿಥಿಗಳಾದ ಕರ್ನಾಟಕ ಆಯುಷ್ ವಿಭಾಗ ಜಂಟಿ ನಿರ್ದೇಶಕ ಡಾ. ಶ್ರೀಧರ ಬಿ. ಎಸ್., ಸಂಹಿತೆಗಳ ಅಧ್ಯಯನ ಉತ್ತಮ ಅಭ್ಯಾಸ. ಅದರಿಂದ ಆಯುರ್ವೇದವನ್ನು ಸಮರ್ಪಕವಾಗಿ ಅರಿತು ಉತ್ತಮ ರೀತಿಯಲ್ಲಿ ಜನಸಾಮಾನ್ಯರಿಗೆ ಚಿಕಿತ್ಸೆ ನೀಡಲು ಸಹಕಾರಿ ಎಂದರು.

ವಿಶ್ವ ಆಯುರ್ವೇದ ಪರಿಷತ್ ಸಂಘಟನಾ ಕಾರ್ಯದರ್ಶಿ ಪ್ರೊ. ಯೋಗೇಶ್ ಚಂದ್ರ ಮಿಶ್ರಾ, ಚರಕ ಸಂಹಿತೆಯ ಪಠಣ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಸಂಹಿತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಬಲ ತಳಹದಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ವಿದ್ಯಾರ್ಥಿಗಳು ಸಂಹಿತಾ ಪಠಣವನ್ನು ನಿರಂತರವಾಗಿ ಮಾಡುವುದರಿಂದ ಸಂಹಿತೆಯ ಒಳಾರ್ಥವನ್ನು ಗ್ರಹಿಸಬಹುದು.

ನಮ್ಮ ಸಂಸ್ಥೆಯಲ್ಲಿ ಕಳೆದ ಒಂದು ತಿಂಗಳಿಂದ ನಿರಂತರ ಸಂಹಿತಾ ಪಾರಾಯಣವನ್ನು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ನಡೆಸಿಕೊಂಡು ಬರುತ್ತಿದ್ದು, ಅದನ್ನು ಪ್ರತಿನಿತ್ಯ ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಸಿಕೊಂಡು ಬರುವುದಾಗಿ ತಿಳಿಸಿದರು.

ಪಿಜಿ ಮತ್ತು ಪಿ.ಎಚ್.ಡಿ ವಿಭಾಗ ಡೀನ್ ಡಾ. ನಿರಂಜನ ರಾವ್, ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಇದ್ದರು.

ಆಯುರ್ವೇದ ಸಂಶೋಧನ ಕೇಂದ್ರ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ ಸ್ವಾಗತಿಸಿದರು. ಚರಕ ಸಂಭಾಷಾ ಸಂಘಟನಾ ಕಾರ್ಯದರ್ಶಿ ಡಾ. ಶ್ರೀಕಾಂತ್ ಪಿ. ಎಚ್. ವಂದಿಸಿದರು. ಡಾ. ಅರುಣ್ ಕುಮಾರ್ ನಿರೂಪಿಸಿದರು.

ಡಾ. ವಿಜಯೇಂದ್ರ ಭಟ್, ಡಾ. ಯೋಗೀಶ ಆಚಾರ್ಯ, ಡಾ. ನಿಶಾಂತ್ ಪೈ, ಡಾ. ಅರ್ಹಂತ್ ಕುಮಾರ್, ಡಾ. ಸಂದೇಶ ಕುಮಾರ್ ಶೆಟ್ಟಿ, ಡಾ. ಶ್ರೀನಿಧಿ ಧನ್ಯ, ಡಾ. ಸದಾನಂದ ಭಟ್ ಸಹಕರಿಸಿದರು.

ಸಂಸ್ಥೆಯ ವಿದ್ಯಾರ್ಥಿಗಳು ಚರಕ ಸಂಹಿತೆಯ ಪ್ರಥಮ ಅಧ್ಯಾಯ ಪಠಿಸಿದರು.

ಬಳಿಕ ವಿಶ್ವ ಕರ್ನಾಟಕ ಆಯುರ್ವೇದ ಪರಿಷತ್ ಅಧ್ಯಕ್ಷ ಡಾ. ಬಿ. ಆರ್. ರಾಮಕೃಷ್ಣ ವ್ಯಾಖ್ಯಾನ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!