ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
******************************
(ಸುದ್ದಿಕಿರಣ ವರದಿ)
ಉಡುಪಿ, ಜು. 10: ಇಲ್ಲಿನ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಉಷಾರಾಣಿ ಎಸ್. ಸುವರ್ಣ ಹಾಗೂ ಉಪನ್ಯಾಸಕಿ ಶೃತಿ ನಾಯಕ್ ಬರೆದಿರುವ Environmental Studies (ಪರಿಸರ ಅಧ್ಯಯನ) ಪುಸ್ತಕವನ್ನು ಈಚೆಗೆ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ| ಸಂಧ್ಯಾ ಆರ್. ನಂಬಿಯಾರ್ ಅನಾವರಣಗೊಳಿಸಿದರು.
ಪ್ರಾಂಶುಪಾಲ ಡಾ| ದೇವಿದಾಸ್ ಎಸ್. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಐಕ್ಯೂಎಸಿ ಸಂಯೋಜಕ ಅರುಣ್ ಕುಮಾರ್ ಬಿ., ಲೇಖಕಿಯರಾದ ಉಷಾರಾಣಿ ಎಸ್. ಸುವರ್ಣ ಮತ್ತು ಶೃತಿ ನಾಯಕ್ ಇದ್ದರು.
ಪರಿಸರ ಅಧ್ಯಯನ ವಿಷಯ ಮಂಗಳೂರು ವಿ.ವಿ. ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಳವಾಗಿ ರಚಿಸಿರುವ ಈ ಪುಸ್ತಕವನ್ನು ಯುನೈಟೆಡ್ ಏಜೆನ್ಸಿಸ್ ಪ್ರಕಟಿಸಿದೆ.