Thursday, December 2, 2021
Home ಲೋಕಾಭಿರಾಮ ಆಚಾರ್ಯಾಸ್ ಏಸ್ : 9, 10ನೇ ತರಗತಿಗೆ ಸೆಕೆಂಡ್-ಟರ್ಮ್ ಕೋರ್ಸ್ ತರಬೇತಿ

ಆಚಾರ್ಯಾಸ್ ಏಸ್ : 9, 10ನೇ ತರಗತಿಗೆ ಸೆಕೆಂಡ್-ಟರ್ಮ್ ಕೋರ್ಸ್ ತರಬೇತಿ

ಆಚಾರ್ಯಾಸ್ ಏಸ್ : 9, 10ನೇ ತರಗತಿಗೆ ಸೆಕೆಂಡ್-ಟರ್ಮ್ ಕೋರ್ಸ್ ತರಬೇತಿ

ಉಡುಪಿ, ನ. 14 (ಸುದ್ದಿಕಿರಣ ವರದಿ): 9 ಮತ್ತು 10 ಹಾಗೂ ಪಿಯುಸಿ, ಸಿಇಟಿ, ಜೆಇಇ, ನೀಟ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ, ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಏಸ್ ವತಿಯಿಂದ ಉಡುಪಿ ಮತ್ತು ಬ್ರಹ್ಮಾವರದ ಏಸ್ ಕೇಂದ್ರಗಳಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸೆಕೆಂಡ್ ಟರ್ಮ್ ಕೋರ್ಸ್ ತರಬೇತಿ ಡಿಸೆಂಬರ್ 1ರಿಂದ ಆರಂಭವಾಗಲಿದೆ.

9 ಮತ್ತು10 ನೇ ತರಗತಿಯ ವಿಜ್ಞಾನ ವಿಭಾಗದ ಫಿಸಿಕ್ಸ್ ,ಕೆಮಿಸ್ಟ್ರಿ, ಬಯೋಲಜಿ ಮತ್ತು ಮ್ಯಾಥ್ಸ್ ವಿಷಯ ಕುರಿತು ಪ್ರಸಿದ್ದ ಉಪನ್ಯಾಸಕರಿಂದ ಸುಮಾರು ಮೂರು ತಿಂಗಳ ಕಾಲ ತರಬೇತಿ ನೀಡಲಾಗುವುದು.

ಪ್ರತೀ ವಾರಾಂತ್ಯದ ಶನಿವಾರ ಅಪರಾಹ್ನ 4ರಿಂದ ಸಂಜೆ 6 ಮತ್ತು ಭಾನುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ತರಬೇತಿ ನಡೆಯಲಿದೆ.

ಈ ತರಬೇತಿ ಜೊತೆಗೆ ಮಾದರಿ ಪರೀಕ್ಷೆಗಳು, ವಿಜ್ಞಾನದ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು.

ಆಸಕ್ತ ವಿದ್ಯಾರ್ಥಿಗಳು ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸ್ ನ ಮೊದಲ ಮಹಡಿಯ ಏಸ್ ಕಚೇರಿ ಅಥವಾ ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಾಲಯದ ಸಮೀಪದ ರಾಧೇಶ್ಯಾಮ್ ಕಟ್ಟಡದ ಏಸ್ ಕಚೇರಿಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಕ್ಷೋಭ್ಯ ಆಚಾರ್ಯ (9901420714) ಅಥವಾ ಉಡುಪಿ ಏಸ್ (0820-4299111)ನ್ನು ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!