ಸುಪ್ರೀತಾ ಕಾಮತ್ ಗೆ ಅಭಿನಂದನೆ
(ಸುದ್ದಿಕಿರಣ ವರದಿ)
ಉಡುಪಿ: ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಸುಪ್ರೀತಾ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರು ಟೆಕ್ಸೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮಾನಂದ ನಾಯಕ್ ಸನ್ಮಾನಿಸಿ, ಶುಭ ಹಾರೈಸಿದರು.
ಸುಪ್ರೀತಾ ಕಾಮತ್ ಅವರಿಗೆ ತರಬೇತಿ ನೀಡಿದ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯ ಉಡುಪಿ ಶಾಖೆಯ ಮಾಜಿ ಅಧ್ಯಕ್ಷ ಸಿಎ ನರಸಿಂಹ ನಾಯಕ್, ಸುಪ್ರೀತಾ ಕಾಮತ್ ತಂದೆ ರಘುನಾಥ್ ಕಾಮತ್ ಮತ್ತು ತಾಯಿ ರಾಧಿಕಾ ಕಾಮತ್ ಇದ್ದರು.