ಮಣಿಪಾಲ: ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಆಸ್ಪತ್ರೆ (ಕೆ.ಎಂ.ಸಿ)ಯ ಅರ್ಭುದ (ಕ್ಯಾನ್ಸರ್) ವಿಭಾಗದ ಚಿಕಿತ್ಸಕ ವೈದ್ಯರನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಘಟಕ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.
ಆಸ್ಪತ್ರೆಯ ಆ್ಯಂಕಲಜಿ ಮುಖ್ಯಸ್ಥ ಡಾ. ಕಾರ್ತಿಕ್ ಉಡುಪ, ಸರ್ಜಿಕಲ್ ಆ್ಯಂಕಲಜಿ ಮುಖ್ಯಸ್ಥ ಡಾ. ನವೀನ್ ಕುಮಾರ್, ರೇಡಿಯೊ ಥೆರಪಿ ಆ್ಯಂಕಲಜಿ ಮುಖ್ಯಸ್ಥ ಕೃಷ್ಣ ಶರಣ್ ಅವರನ್ನು ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ರಾಘವೇಂದ್ರ ನಾಯಕ್ ಸನ್ಮಾನಿಸಿದರು.
ಮಲಬಾರ್ ಗೋಲ್ಡ್ ನ ತಂಝಿಮ್ ಮತ್ತು ನಿತಿನ್ ಶೇಟ್ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಸಚಿನ್ ಕಾರಂತ್, ಮೋಹನ ಶೆಟ್ಟಿ ಇದ್ದರು.
ಕೃಷ್ಣ ಪ್ರಸಾದ್ ಸ್ವಾಗತಿಸಿ, ವಂದಿಸಿದರು.