Saturday, July 2, 2022
Home ಲೋಕಾಭಿರಾಮ ಆರಂಬ ಕೃಷಿ ಬದುಕಿನತ್ತ ಒಲವು ತೋರದಿದ್ದಲ್ಲಿ ಗಂಡಾಂತರ

ಕೃಷಿ ಬದುಕಿನತ್ತ ಒಲವು ತೋರದಿದ್ದಲ್ಲಿ ಗಂಡಾಂತರ

ಉಡುಪಿ: ಇಂದಿನ ಯುವಜನತೆ ಕೃಷಿಯತ್ತ ಒಲವು ತೋರಿಸಬೇಕಾದುದು ಅತೀ ಅಗತ್ಯ. ಪ್ರಸ್ತುತ ಕೃಷಿ ಬಗ್ಗೆ ಅನುಭವ ಹೊಂದಿರುವ ಕೊನೆಯ ತಲೆಮಾರು ನಮ್ಮೊಂದಿಗಿದ್ದು, ಮುಂದಿನ ತಲೆಮಾರಿಗೆ ಕೃಷಿ ಬದುಕಿನ ಒಲವು ಪಸರಿಸದಿದ್ದಲ್ಲಿ ತುತ್ತು ಅನ್ನಕ್ಕಾಗಿ ಹಾಹಾಕಾರ ಪಡುವ ಸ್ಥಿತಿ ಬಂದೊದಗೀತು ಎಂದು ಕೃಷಿ ಲೇಖಕ ಡಾ| ನರೇಂದ್ರ ರೈ ದೇರ್ಲ ಆತಂಕ ವ್ಯಕ್ತಪಡಿಸಿದರು.

ಅಜ್ಜರಕಾಡು ಡಾ| ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ ಸಲ್ವಾಡಿ ಅವರ ಚೊಚ್ಚಲ ಕೃತಿ ಸೌತ್ ಕೆನರಾ ವಸಾಹತುಶಾಹಿ ಪ್ರಭುತ್ವದಲ್ಲಿ ಕೃಷಿ ಬದುಕು ಪುಸ್ತಕ ಅನಾವರಣಗೊಳಿಸಿ ಮಾತನಾಡಿದರು.

ಅನ್ನ ಬರುವ ದಾರಿ ತಿಳಿಯದಿರುವುದೇ ವರ್ತಮಾನದ ದೊಡ್ಡ ದುರಂತ. ನಾವು ಏನನ್ನೂ ತಿಳಿಯದಿದ್ದರೂ ನಡೆಯುತ್ತದೆ. ಆದರೆ, ಉಣ್ಣುವ ಅನ್ನ ಹೇಗೆ ಬರುತ್ತದೆ ಎಂದು ತಿಳಿದಿರಲೇಬೇಕು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇತಿಹಾಸಕಾರ ಡಾ| ಬಿ. ಜಗದೀಶ ಶೆಟ್ಟಿ ಕೃತಿ ಪರಿಚಯ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಕ ಡಾ| ಭಾಸ್ಕರ ಶೆಟ್ಟಿ ಸಲ್ವಾಡಿ ಕೋವಿಡ್ 19ರ ಪ್ರತಿಕೂಲದ ನಡುವೆ ಸೃಜನಶೀಲ ಕೃತಿ ಹೊರತರಲು ಸಾಧ್ಯವಾದುದರ ಕುರಿತು ಸಂತಸ ವ್ಯಕ್ತಪಡಿಸಿ, ಕೃತಿಯ ಹುಟ್ಟಿನ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.

ಕಾಲೇಜಿನ ಇಂಗ್ಲೀಷ್ ವಿಭಾಗ ಮುಖ್ಯಸ್ಥ ಸೋಜನ್ ಕೆ. ಜಿ. ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ| ರವಿರಾಜ ಶೆಟ್ಟಿ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!