Monday, July 4, 2022
Home ಲೋಕಾಭಿರಾಮ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧೆಗೆ ಆಯ್ಕೆ

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧೆಗೆ ಆಯ್ಕೆ

ಉಡುಪಿ: ಮಲ್ಪೆ ಬೈಲಕೆರೆ ಉಷಾ ಮತ್ತು ಯುವರಾಜ್ ದಂಪತಿ ಪುತ್ರಿ ರೋಶಿನಿ, ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ನಡೆಯುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಥಿಯಾಗಿದ್ದಾರೆ.

ಬೆಂಗಳೂರು ಮಲ್ಲೇಶ್ವರಮ್ ವಿದ್ಯಾ ಮಂದಿರ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿರುವ ಈಕೆ, ಕಳೆದ ಸುಮಾರು 5 ವರ್ಷದಿಂದ ನಾಟ್ಯೇಶ್ವರ ನೃತ್ಯ ಸಂಘದ ಕೆ. ಪಿ. ಸತೀಶ್ ಬಾಬು ಅವರಲ್ಲಿ ಭರತ ನಾಟ್ಯ ಮತ್ತು ಕಳೆದ ಒಂದೂವರೆ ವರ್ಷದಿಂದ ಪಾಶ್ಚಾತ್ಯ ನೃತ್ಯದ ವಿವಿಧ ಪ್ರಕಾರಗಳನ್ನು ಗಾಯತ್ರಿ ನಗರದ ರಾಕ್ ಬ್ರೇಕರ್ಸ್ ಡ್ಯಾನ್ಸ್ ಅಕಾಡೆಮಿಯ ಟಗರು ರಾಜು ಅವರಲ್ಲಿ ಅಭ್ಯಸಿಸುತ್ತಿದ್ದಾರೆ.

2019ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದ ಉದ್ಭವ ಉತ್ಸವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾಗಿದ್ದಾರೆ.

ಒರಿಸ್ಸಾದ ಭುವನೇಶ್ವರದ ಕಳಿಂಗ ವಿಶ್ವವಿದ್ಯಾಲಯದಲ್ಲಿ ನಡೆದ ಲಿಟ್ಲ್ ಮಿಸ್ ಇಂಡಿಯಾ 2019 ಸ್ಪರ್ಧೆಯಲ್ಲಿ ಲಿಟ್ಲ್ ಮಿಸ್ ಕರ್ನಾಟಕ ಮತ್ತು ಲಿಟ್ಲ್ ಮಿಸ್ ರಪುಂಜೆಲ್ ಪ್ರಶಸ್ತಿ ಪಡೆದಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!