ಸಾರಸ್ವತರ ಉದ್ಭೋದಕಿ, ಕವನ ಚಿತ್ತಾರಗಳಲ್ಲಿ ಗೆದ್ದ ಶಿಕ್ಷಕಿ

ಸಾರಸ್ವತರ ಉದ್ಭೋದಕಿ, ಕವನ ಚಿತ್ತಾರಗಳಲ್ಲಿ ಗೆದ್ದ  ಶಿಕ್ಷಕಿ

ಸವಿಯಾದ ನುಡಿಯನ್ನು ಆಡುತಲಿ ನಡೆಯುವರು
 ಗವಿಯೊಳಗೆ  ಶಿಲೆಯಂತೆ ಆಗಿರುವರು
 ನವಿಲಿನದ ಸುಂದರತೆ ಬರಹದಲಿ ಮೂಡಿಸುತ
 ಕವಿಯಾಗಿ ಸಾಗುತಿರೆ ಲಕ್ಷ್ಮಿ ದೇವಿ......


 ಪ್ರೀತಿಯಿಂದ ಮಾತನಾಡುತ್ತಾ ಹೊಂದಿಕೊಳ್ಳುತ್ತಾ ಗವಿಯೊಳಗಿನ   ಶಿಲೆಯಂತೆ ಇದ್ದುಬಿಡುತ್ತಾರೆ.ನವಿಲು  ನೋಡಲು ಎಷ್ಟು ಸುಂದರವಾಗಿದೆ ಎನ್ನುತ್ತೇವೆ. ಅದೇ ರೀತಿ ಇವರ ಬರಹಗಳು ಉತ್ತಮವಾಗಿ ಯಾರ ಮನಸ್ಸಿಗೂ ನೋವು ನೀಡದಂತೆ ಇರುತ್ತದೆ. ಶೈಕ್ಷಣಿಕವಾಗಿ  ಹಲವಾರು ಮಕ್ಕಳಿಗೆ ವಿದ್ಯಾದಾನ ಮಾಡಿ ಪ್ರವೃತ್ತಿಯಲ್ಲಿ  ಕವಿಯಿತ್ರಿಯಾಗಿ, ಲೇಖಕಿಯಾಗಿ ತಮ್ಮದೇ ಆದಂತಹ ಸಾಹಿತ್ಯ ಕೃಷಿಯನ್ನು ಮಾಡುತ್ತಿದ್ದಾರೆ. ಇಂದು ಬಹುಮುಖ ಪ್ರತಿಭೆಯಾಗಿ ಎಲ್ಲೆಡೆಯಲ್ಲೂ ಗುರುತಿಸಿಕೊಂಡಿರುವ ಶ್ರೀಮತಿ ಸಾವಿತ್ರಮ್ಮ  ಓಂಕಾರ್, ಅರಸೀಕೆರೆ   ಇವರು ತಂದೆ   ವೇದಮೂರ್ತಿ ಗುರುನಂಜಯ್ಯನವರು  ತಾಯಿ ಶ್ರೀಮತಿ ಗಂಗಮ್ಮನವರ ಪುತ್ರಿಯಾಗಿ ಅರಸೀಕೆರೆಯಲ್ಲಿ  ಜನಿಸಿದರು. ಚಿಕ್ಕ ವಯಸ್ಸಿನಿಂದ ಚಿತ್ರ ಬಿಡಿಸುವ ಹಂಬಲ, ಪ್ರೌಢಶಾಲೆಗಳಲ್ಲಿ  ಕೆಲವು ಸಾಲುಗಳನ್ನು ಬರೆದಿಡುವ ಹವ್ಯಾಸ, ಹೀಗೆ ಸಾಗುತ್ತಾ  ಬಂದವರು. ಐದು ಜನ ಅಕ್ಕಂದಿರು ಒಬ್ಬ‌ಅಣ್ಣನೊಂದಿಗೆ ತುಂಬು ಕುಟುಂಬದಲ್ಲಿ ಬೆಳೆದ ಇವರು   ಶ್ರೀಯುತ ಓಂಕಾರಪ್ಪರವರ ಧರ್ಮಪತ್ನಿಯಾಗಿ ಸಾಂಸಾರಿಕ   ಜೀವನದಲ್ಲಿ ಇಬ್ಬರು ಪುತ್ರರನ್ನು ಪಡೆದಿದ್ದಾರೆ. ಮೊದಲನೇ ಮಗ ವಿಶ್ವಾಸ್, ಎರಡನೇ ಮಗ ಭುವನ್. ಇವರು ವೃತ್ತಿಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದು. ತಮ್ಮ ಜೀವನದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕಲಿಸಿದ್ದಾರೆ. ಇವರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ್ದು  ಅರಸೀಕೆರೆ ಲೇಖಕಿಯರ ಬಳಗ. ಅಲ್ಲಿಂದ ಇವರ ಸಾಹಿತ್ಯದ ಪಯಣ ಸಾಗಲು  ಪ್ರಾರಂಭವಾಯಿತು. ಇವರ ಸಾಹಿತ್ಯ ಬೆಳವಣಿಗೆಗೆ ಹಾಸನದ ಜಿಲ್ಲಾ ಲೇಖಕಿರ ಬಳಗ,‌ ಅಭಿನಂದನಾ ಬಳಗ, ಪ್ರತಿಮಾ ಪ್ರತಿಷ್ಠಾನ, ಅರಸೀಕೆರೆ ಲೇಖಕಿಯರ ಬಳಗ ,ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ತು ,ಬರಹಗಾರರ ಬಳಗ ಹೀಗೆ ಹಲವರು ಕಾರಣರೆಂದು ಹೇಳುವರು
*ಹಾಸನ ಜಿಲ್ಲೆಯ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಉದಯೋನ್ಮಖರಾದ. ಸುಮಾರು ೫೦ ಕ್ಕೂ ಹೆಚ್ಚು  ಕವಿ, ಲೇಖಕರ ಪರಿಚಯಾತ್ಮಕ ಲೇಖನವನ್ನು‌ ಪ್ರತಿಷ್ಠಿತ ಪ್ರತಿನಿಧಿ,ಸಿಂಹಧ್ವನಿ, ಹಾಸನವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿರುವುದು. ಇವರ  ಬೇರೆಯವರನ್ನು ಬೆಳೆಸುವ ಗುಣವಿದೆ ಎಂದು ಹೇಳಬಹುದು. ಸತ್ಯ ನಿತ್ಯ ಮಿತ್ಯಗಳ  ನಡುವಿನ ವ್ಯತ್ಯಾಸಗಳನ್ನು ತಿಳಿದು ತಮ್ಮ ಕಾರ್ಯವನ್ನು ತಮ್ಮ ಪಾಡಿಗೆ ಮಾಡಿಕೊಂಡು ಹೋಗುತ್ತಿದ್ದಾರೆ. ಹಲವಾರು ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು , ಪ್ರಶಸ್ತಿಗಳನ್ನು ಪಡೆದು ಎಲ್ಲರ ಪ್ರಸಂಶೆಗೆ ಪಾತ್ರರಾಗಿದ್ದಾರೆ . ಹಲವಾರು ಕಾರ್ಯಕ್ರಮಗಳಲ್ಲಿ  ಅತಿಥಿಗಳಾಗಿ ಬಂದು ಯುವಕವಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
 ಗುರುಕುಲ   ಪ್ರತಿಷ್ಠಾನದ ಹಾಸನ, ಹಾವೇರಿ,ರಾಯಚೂರು,ಕೊಡಗು‌ ಮುಂತಾದ ಜಿಲ್ಲೆಗಳ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕವನ ಚುಟುಕು ಹನಿಗವನಗಳಲ್ಲಿ ಉತ್ತಮ ಸ್ಥಾನ ಗಳಿಸಿದ್ದಾರೆ. ಹಲವಾರು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ .
* ಆರೋಗ್ಯ ಇಲಾಖೆಯವರು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ   ಗಳಿಸಿದ್ದಾರೆ.
* ಗುರುಕುಲ ಕೊಡಗು ಪ್ರತಿಷ್ಠಾನ ದಿಂದ‌  * ಹೆಮ್ಮೆಯ ‌ಮಹಿಳೆ * ಪ್ರಶಸ್ತಿ ಪಡೆದಿದ್ದಾರೆ.
* ಸಂಸ್ಕ್ರತಿಯ ನಾಡು ಎಂಬ ಕವನ ಸಂಕಲನಕ್ಕೆ ಗುರುಕುಲ ಪ್ರತಿಷ್ಠಾನದವರಿಂದ‌  *ಸಾಹಿತ್ಯ ಕೇಸರಿ* ಪುರಸ್ಕಾರ ಲಭಿಸಿದೆ.
"ವಿಶುಭುವನ್  " ಎಂಬ ಮಕ್ಕಳ‌ ಸಣ್ಣಕಥಾ ಸಂಕಲನಕ್ಕೆ ಜಾನಕೀನಾಥ ಪ್ರತಿಷ್ಠಾನದಿಂದ‌ ಪ್ರಶಸ್ತಿ ಲಭಿಸಿದೆ.
* ನಾಗಮಂಗಲದಲ್ಲಿ ನಡೆದ ಕವಿಗೋಷ್ಠಿಯಲ್ಲಿ ‌ಭಾಗವಹಿಸಿ ನೆನಪಿನ ಕಾಣಿಕೆ ಪಡೆದಿದ್ದಾರೆ.
*ಬೆಂಗಳೂರಿನಲ್ಲಿ ಶ್ರೀ ಸಿದ್ದರಾಮ ಹೊನಕಲ್ ರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಗಝಲ್ ವಾಚನ ಮಾಡಿ ಮೆಚ್ಚುಗೆ ಪಡೆದಿದ್ದಾರೆ.
* ಗಾಂಧಿ ಬಸವ ಬುದ್ಧ ಪ್ರತಿಷ್ಠಾನದವರು ಕೊಡಮಾಡುವ *ಲೋಹಿಯಾ* ಪುರಸ್ಕಾರವನ್ನು೨೦೨೩ನೇ ಸಾಲಿನಲ್ಲಿ ಪಡೆದಿದ್ದಾರೆ.
*ಗುರುಕುಲ  ಪ್ರತಿಷ್ಠಾನ ಕೊಡುಮಾಡುವ  *ಅಪ್ರಕಟಿತ ಕೃತಿ* ಗೆ ೨೦೨೩ ನೇ ಸಾಲಿನಲ್ಲಿ ಇವರ ಕೃತಿ ಪ್ರಶಸ್ತಿ ಪಡೆದಿದೆ
* ಸ್ವರ್ಣಸಿರಿ ಪ್ರಶಸ್ತಿ೨೦೨೪ ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
* ವಿಜಯ ಸಮರ್ಥ ಪ್ರತಿಷ್ಠಾನ ನಡೆಸಿದ‌ *ಶತಕವಿಗೋಷ್ಠಿ* ಯಲ್ಲಿ ಭಾಗವಹಿಸಿದ್ದಾರೆ.
* ಅರಕಲಗೂಡಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನಲ್ಲಿ *ಶತಕವಿಗೋಷ್ಠಿ* ಯಲ್ಲಿ ಭಾಗವಹಿಸಿದರು ತ್ತಾರೆ.
* ಇದುವರೆಗೂ ಬೆಳಗಾವಿ,ಬೆಂಗಳೂರು(೨ ಸಾರಿ)
ಹಂಪೆ.ಅರಸೀಕೆರೆ, ಮೈಸೂರು, ಅರಕಲಗೂಡು ಹೀಗೆ ೭ ಕಡೆ ತಮ್ಮ ಚಿತ್ರಕಲೆ ಪ್ರದರ್ಶಿಸಿ ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಬಹುಮುಖ ಪ್ರತಿಭೆಯಾಗಿ ಹಲವಾರು ರೀತಿಯ ಪ್ರಶಸ್ತಿಗಳನ್ನು ಪಡೆಯುವುದು ತನ್ನದೇ ಆದಂತಹ ಹಾದಿಯಲ್ಲಿ ಸಾಗುತ್ತಿರುವ ಸಾವಿತ್ರಮ್ಮ ಓಂಕಾರವರು  ಅಷ್ಟಕ್ಕೆ ಸೀಮಿತವಾಗದೆ ಪುಸ್ತಕಗಳ ವಿಮರ್ಶೆಗಳನ್ನು ಮಾಡಿದ್ದಾರೆ 
ಇದುವರೆಗೂ ೧೫ಕ್ಕೂ ಹೆಚ್ಚು ಲೇಖಕರ ಕೃತಿ ವಿಮರ್ಶೆ ಬರೆದಿದ್ದಾರೆ.

 ಹಲವಾರು ರೀತಿಯ ಪುಸ್ತಕಗಳನ್ನು ಸಹ  ಲೋಕಾರ್ಪಣೆಗೊಳಿಸಿ  ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಪ್ರಕಟಿತ ಕೃತಿಗಳು:-
*ಸಂಸ್ಕ್ರತಿಯ ನಾಡು-ಕವನ ಸಂಕಲನ
* ವಿಶುಭುವನ್-ಸಣ್ಣಮಕ್ಕಳ ಕಥಾ ಸಂಕಲನ
* ಕವನದೂರಿಗೆ ಪಯಣ" ಕವನ ಸಂಕಲನ
* ಅಂತರಂಗದ ಅಕ್ಷರಗಳು* ಗಝಲ್ ಸಂಕಲನ
* ಕಂದನಿಗೊಂದು ಚಂದದ ಗೀತೆ"‌
ಶಿಶುಗೀತೆ ಸಂಕಲನ
* ಸಂಭ್ರಮ*   ಕಥಾಸಂಕಲನ
* ಕನ್ನಡದ ಸವ್ಯಸಾಚಿ ಡಾ. ಕೊಳ್ಚಪ್ಪೆ ಗೋವಿಂದಭಟ್ ವ್ಯಕ್ತಿಚಿತ್ರ
* ಆ ಕ್ಷಣ * ಎನ್ನುವ ಸಣ್ಣಕಥೆಯು ಇತ್ತೀಚೆಗೆ ಕಿರುಸಿನಿಮಾ ಆಗಿ ಜನಮನ್ನಣೆ‌ ಪಡೆದಿದೆ. ಇಷ್ಟಕ್ಕೆ ಸೀಮಿತವಾಗದೆ ಮುದ್ರಣ ಹಂತದಲ್ಲಿ *. ಕಾದಂಬರಿಯು ಲೋಕಾರ್ಪಣೆಗೊಳ್ಳಲಿದೆ.
ಇವರು ಬರೆದಿರುವ ೫೦ಕ್ಕೂ ಹೆಚ್ಚು ಸಾಹಿತಿಗಳ ಪರಿಚಯಾತ್ಮಕ ಪುಸ್ತಕ ಮುದ್ರಣಕ್ಕೆ ತಯಾರಾಗುತ್ತಿದೆ.
ಎಲ್ಲರೊಂದಿಗೆ ಹೊಂದಿಕೊಂಡು ಎಲ್ಲಾ ಕಾರ್ಯಕ್ರಮಗಳಲ್ಲೂ ಲವಲವಿಕೆಯಾಗಿ ಭಾಗವಹಿಸುವ ಗುಣವಿದೆ. ತಮ್ಮದೇ ಆದಂತಹ ಚಿತ್ರಕಲೆಯ ಮುಖಾಂತರ ಹಲವರ ಚಿತ್ರಗಳನ್ನು ಬಿಡಿಸಿರುವುದು ಎಲ್ಲರಲ್ಲೂ ಸಂತಸವನ್ನು ತರುತ್ತದೆ. ಅಷ್ಟೇ ಅಲ್ಲದೆ  ಈಗ ಹೊರ ಬರುತ್ತಿರುವ ಯುವಕವಿಗಳ ಬರಹಗಳಿಗೆ ತನ್ನ ಕಂಠದಿಂದ ರಾಗ ಹಾಕಿ
 ಹಾಡನ್ನು ಹಾಡುತ್ತಾರೆ.
" ಹುಟ್ಟುವುದು,ಸಾಯುವುದು ಸಹಜ
 ಅದರ ಮಧ್ಯದಲ್ಲಿ ಏನಿದೆ ಮನುಜ
 ತಿಳಿದು ಅರಿತು ಬದುಕಬೇಕು
 ಸದಾ ಒಳಿತನ್ನೆ  ಬಯಸಬೇಕು
 ಚೆಂದ ಚೆಂದದ ಹೂವುಗಳು ಇದ್ದಂತೆ
 ನಿಷ್ಕಲ್ಮಶವಾದ ಪ್ರೀತಿಯ ಮನಸ್ಸು ಹೊಂದುವಂತೆ
 ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣವಿರುವದು
 ಕೆಲವರಿಗೆ ಮಾತ್ರ ಅವರಲ್ಲಿ ನೀವು ಒಬ್ಬರಾಗಿರುವುದು
 ನಮ್ಮನ್ನೆಲ್ಲ ಪ್ರೀತಿಯಿಂದ ಕಾಣುವವರು ಇವರು "
 ಎಲ್ಲರೊಂದಿಗೆ  ತಾಯಿಯಾಗಿ, ಸೋದರಿಯಾಗಿ, ತನ್ನದೇ ಆದಂತಹ ಹಲವಾರು ರೀತಿಯ  ಪ್ರತಿಭೆಯಿಂದ ಚಿರಪರಿಚಿತರಾಗಿರುವವರು ಇವರು. ಹಲವರ  ಪರಿಚಯವನ್ನ ಬರೆದು ಪರಿಚಯಿಸುವಂತಹ ಗುಣವಿರುವ ಇವರ ಪರಿಚಯ ಲೇಖನ ಬರೆಯುವುದೆಂದರೆ ನನಗೆ ಸಿಕ್ಕ ಅದೃಷ್ಟವೇ ಸರಿ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಹಿತಿಯಾಗಿ, ಸಾಂಸ್ಕೃತಿಕವಾಗಿ, ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸೇವೆಯನ್ನು ಸಲ್ಲಿಸುವತ್ತ ಮುಂದೆ ಸಾಗಲಿ  ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹೇಳುತ್ತಾ  ಈ ಪರಿಚಯ ಲೇಖನವನ್ನು ಮುಗಿಸುತ್ತಿದ್ದೇನೆ ಜೈ ಹಿಂದ್ ಜೈ ಕರ್ನಾಟಕ ಮಾತೆ.

  

ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
ಸಾಮಾಜಿಕ ಚಿಂತಕಿ, ಶಿಕ್ಷಕಿ. ಹಾಸನ.