ಫಿನ್‌ಲ್ಯಾಂಡ್‌ನಲ್ಲಿ ಚಿನ್ನದ ಪದಕ ಗೆದ್ದ ಗ್ರಾಮೀಣ ಪ್ರತಿಭೆ ಹೆಗ್ಗಡಹಳ್ಳಿ ಜಗನ್ನಾಥ್ ಹೆಚ್.ಎಂ

ಫಿನ್‌ಲ್ಯಾಂಡ್‌ನಲ್ಲಿ ಚಿನ್ನದ ಪದಕ ಗೆದ್ದ ಗ್ರಾಮೀಣ ಪ್ರತಿಭೆ  ಹೆಗ್ಗಡಹಳ್ಳಿ ಜಗನ್ನಾಥ್ ಹೆಚ್.ಎಂ

ಕಿಕ್ಕೇರಿ ಸಮೀಪದ ಹೆಗ್ಗಡಹಳ್ಳಿ ಗ್ರಾಮದ ಯುವಕ  ಫಿನ್‌ಲ್ಯಾಂಡ್‌ನ ಲಾಹ್ತಿ ನಗರದಲ್ಲಿ ನಡೆದ ಅಂತರಾಷ್ಟ್ರೀಯ ಅಂಕವಿಲರ  ಪ್ಯಾರಾ ಟೇಬಲ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ  ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತಂದಿದ್ದಾನೆ..

ಮೂಲತ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಮಂಜೇಗೌಡ ರವರ ಸುಪುತ್ರನಾದ  ಜಗನ್ನಾಥ್ ಎಚ್ ಎಂ ಅವರು ಪುರುಷರ ಸಿಂಗಲ್ಸ್ ವೀಲ್ ಚೇರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಆಗಸ್ಟ್ 28 ರಿಂದ 30 ರವರೆಗೆ ಫಿನ್ ಲ್ಯಾಂಡ್ ನಲ್ಲಿ ನಡೆದ ಈ ಟೂರ್ನಮೆಂಟ್ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಜಗನ್ನಾಥ್ ಅವರು ಚಿನ್ನಕ್ಕೆ ಮುತ್ತಿಕ್ಕಿದರು.

ಹೀಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಗಳಿಸಿ ನಮ್ಮ ಮಂಡ್ಯ ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಗೌರವವನ್ನು ಹೆಚ್ಚಿಸಿದ್ದಾರೆ ತಾಲ್ಲೂಕಿನ ಗಣ್ಯರುಗಳು ಜಗನ್ನಾಥ್ ಶುಭ ಹಾರೈಸಿದ್ದಾರೆ..