ಮಕ್ಕಳು ಪೋಷಕರ ಮಾತುಗಳನ್ನು ತಿರಸ್ಕರಿಸಬಾರದು: ಡಾ.ಎಚ್.ತುಕಾರಾಂ

ಮಕ್ಕಳು ಪೋಷಕರ ಮಾತುಗಳನ್ನು ತಿರಸ್ಕರಿಸಬಾರದು: ಡಾ.ಎಚ್.ತುಕಾರಾಂ

ನಮ್ಮ ಕುಟುಂಬ ಚಾರಿಟಬಲ್ ಟ್ರಸ್ಟ್ "ಅರಿವು" ಎಂಬ ಹೆಸರಿನಲ್ಲಿ ಕಾನೂನು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಬೆಂಗಳೂರಿನ ಅವಲಹಳ್ಳಿಯ ಮುನೇಶ್ವರ ಬ್ಲಾಕ್ ನಲ್ಲಿರುವ ನ್ಯಾಷನಲ್ ಇಂಗ್ಲೀಷ್ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಲೇಖಕರಾದ ಡಾ. ಎಚ್. ತುಕಾರಾಂ ಮಾತನಾಡಿ 'ಮಕ್ಕಳು ಮನೆಯಲ್ಲಿ ಪೋಷಕರು ಹೇಳುವ ಮಾತುಗಳನ್ನು ತಪ್ಪದೇ ಪಾಲಿಸಬೇಕು ಮತ್ತು ಹಿರಿಯರಿಗೆ ಗೌರವ ತೋರಿಸಬೇಕು. ಹಿರಿಯರ ಮಾತುಗಳನ್ನು ತಿರಸ್ಕಾರದಿಂದ ನೋಡಬಾರದು, ಮಕ್ಕಳು ಜೀವನದಲ್ಲಿ ಶಿಸ್ತನ್ನು ಬೆಳಸಿಕೊಳ್ಳಬೇಕು ಅದರಿಂದಲೇ ನಿಮ್ಮ ಭವಿಷ್ಯ ಚೆನ್ನಾಗಿರುತ್ತದೆ' ಎಂದು ಹೇಳಿದರು.

ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸ್ ಇನ್ಸಸ್ಪೆಕ್ಟರ್ ರವಿಶಂಕರ್ ಅವರು ಮಾತನಾಡಿ 'ಮಕ್ಕಳು ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಸಲಹೆ ನೀಡಿದರು. ವೀಲಿಂಗ್ ಮಾಡದಂತೆ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮಕ್ಕಳಿಗೆ ಮನವರಿಕೆ ಮಾಡಿದರು. 

ಬ್ಯಾಟರಾಯನಪುರ ಸರ್ಕಲ್ ಇನ್ಸಸ್ಪೆಕ್ಟರ್ ವೆಂಕಟೇಶ್ ಮಾತನಾಡಿ ಮಕ್ಕಳು ಓದುವ ಸಮಯದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳಬಾರದು. ಕೆಟ್ಟ ಚಟಗಳನ್ನು ಬೆಳೆಸಿಕೊಳ್ಳಬಾರದು. ಓದು ಮತ್ತು ಬರವಣಿಗೆಯಲ್ಲಿ ಹೆಚ್ಚು ಸಮಯವನ್ನು ವಿನಿಯೋಗಿಸಬೇಕು. ಮೊಬೈಲ್ ಹೆಚ್ಚು ನೋಡುವುದನ್ನು ಮಾಡಬಾರದು' ಎಂದು ತಿಳಿಹೇಳಿದರು.

 ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ತ್ರಿಸೂಲ್ ಎಂ ರವಿಶಂಕರ್ ಮಾತನಾಡಿ ಯಾವುದೇ ಅಪರಾಧಗಳನ್ನು ಮಾಡಿ ಕಾನೂನು ಶಿಕ್ಷೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಮಕ್ಕಳು  ಹಾಳು ಮಾಡಿಕೊಳ್ಳಬಾರದು ಎಂದು ಮಕ್ಕಳಿಗೆ ಬುದ್ಧಿವಾದವನ್ನು ಹೇಳಿದರು. 

ಈ ಸಂದರ್ಭದಲ್ಲಿ ವಕೀಲರ ಸಂಘದ ಟಿ.ಆರ್.ಮಂಜುನಾಥ್, ಎಸ್.ವಿ.ಜಿ.ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಬಿ.ಎಂ.ಪಟೇಲ್ ಪಾಂಡು, ಪ್ರಾಂಶುಪಾಲರಾದ ಶ್ರೀಮತಿ ಚಿಕ್ಕಮ್ಮ, ಆಡಳಿತಾಧಿಕಾರಿಗಳಾದ ಬಿ.ಪಿ.ಹರ್ಷ ಉಪಸ್ಥಿತರಿದ್ದರು.ಧನರಾಜ್, ಎಂ.ಜೆ.ಚನ್ನಕೇಶವ, ಹೆಚ್.ಎನ್.ಹರೀಶ್ ಕುಮಾರ್, ಭಾಸ್ಕರ್ ತೋಟಗೇರಿ ಇವರುಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು.