ಸರ್ಕಾರಿ ಶಾಲ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ನೂಟ್ ಬುಕ್ ವಿತರಣೆ
ಕೃಷ್ಣರಾಜಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿ ನೂಟ್ ಬುಕ್, ಬ್ಯಾಗ್ ವಿತರಣಾ ಕಾರ್ಯಕ್ರವನ್ನು ಆಯೋಜನೆ ಮಾಡಲಾಗಿತ್ತು.. ಗ್ರಾಮ ಪಂಚಾಯತಿ ವ್ಯಾಪ್ತಿಯ ಬರುವ ಮಾದಾಪುರ, ಮಾದಾಪುರ ಕೊಪ್ಪಲು, ಚಿನ್ನೇನಹಳ್ಳಿ, ಕೋಟಹಳ್ಳಿ, ಗೊಂದಿಹಳ್ಳಿ, ಗಾಣದಹಳ್ಳಿ, ಗೊಡೆಹೊಸಹಳ್ಳಿ, ಸೇರಿದಂತೆ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೂಟ್ ಬುಕ್ ಮತ್ತು ಬ್ಯಾಗ್, ನೀರಿನ ಬಾಟಲ್, ರೈನ್ ಕೊಟ್, ಆಟದ ಸಮವಸ್ತ್ರಗಳನ್ನು ಹೊಸಕೋಟೆಯ ಸಮಾಜ ಸೇವಕರಾದ ಶ್ರೀಮತಿ ಪುಷ್ಪ ಮತ್ತು ಜಿ ನಾಗರಾಜು ರವರ ಸಹಕಾರದೊಂದಿಗೆ ಅವರ ಪರವಾಗಿ ನಾಗರಾಜು ರವರ ಅಭಿಮಾನಿಯಾದ ಯೋಗೇಶ್ ವಿತರಿಸಿದ್ರು..
ನಂತರ ಮಾತನಾಡಿ ಜಿ. ನಾಗರಾಜು ರವರು ಕೆಳದ ಎರಡು ವರ್ಷದಿಂದ ಮಾದಾಪುರ ಗ್ರಾಮದ ಶಾಲೆಗೆ ತುಂಬಾ ದೊಡ್ಡ ಮಟ್ಟದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಕೆಳದ ವರ್ಷ ಶಾಲೆಯ ಮಕ್ಕಳ ಅನುಕೋಲಕ್ಕಾಗಿ ಎರಡು ಶಾಲ ವಾಹನಗಳನ್ನು ಕೊಡುಗೆಯಾಗಿ ನೀಡಿದರು.. ಅದೇ ರೀತಿ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯನ್ನು ದತ್ತು ಪಡೆದು ಶಾಲೆ ಅಭಿವೃದ್ಧಿಯತ್ತ ಕೊಂಡೈದಿದ್ದಾರೆ ಅಲ್ಲದೆ ಮಕ್ಕಳಿ ಬೇಕಾಗಿರು ನೂಟ್ ಬುಕ್, ಕ್ರೀಡಾ ಸಾಮಾಗ್ರಿಗಳು, ಸಮವಸ್ತ್ರ ಸೇರಿದಂತೆ ಅನುಕೂಲ ಮಾಡಿದ್ದಾರೆ ಅಲ್ಲದೆ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳಿ ತಲಾ 25 ಸಾವಿರ ನಗುದು ಬಹುಮಾನ ನೀಡಲಾಗಿದೆ .. ನಾನು ಸಹ ಇ ಓದಿ ಬೆಳೆದ ಶಾಲೆ ಇದಾಗಿದ್ದು. ಈ ಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಬಡ ಮಕ್ಕಳಿಗೆ ಅನುಕೂಲಕ್ಕಾಗಿ ಯಾವುದೇ ರೀತಿ ಸಹಾಯ, ಸಹಕಾರ ಮಾಡಲು ಸಿದ್ಧನಿದ್ದೇನೆ. ಒಟ್ಟಿನಲ್ಲಿ ನಮ್ಮೂರಿ ಸರ್ಕಾರಿ ಶಾಲೆ ಮಕ್ಕಳು ಚನ್ನಾಗಿ ಓದಬೇಕು ಎನ್ನುವುದು ನನ್ನ ಉದ್ದೇಶವಾಗಿದೆ ಎಂದರು..
ಪಿ.ಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹೊಸಕೋಟೆಯ ಸಮಾಜ ಸೇವಕರಾದ ಜಿ ನಾಗರಾಜು ರವರ ಸಹಯೋಗದಲ್ಲಿ ಸುಮಾರು 500ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಬುಕ್, ಬ್ಯಾಗ್ ಪೆನ್ನು, ಕ್ರೀಡಾ ಸಾಮಾಗ್ರಿ, ಸಮವಸ್ತ್ರ, ಕೊಡೆ, ರೈನ್ ಕೊಟ್,ಗಳನ್ನು ನಮ್ಮ ಗ್ರಾಮದ ಯುವ ಮುಖಂಡ ಯೋಗೇಶ್ ರವರು ವಿತರಣೆ ಮಾಡಿದ್ದಾರೆ ವಿದ್ಯಾರ್ಥಿಗಳು ಇದರ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧನೆ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾದಾಪುರ ಗ್ರಾಮದ ಯುವ ಮುಖಂಡ ಯೋಗೇಶ್ ಎಂ ಎನ್ , ಶ್ರೀಮತಿ ಮಾನಸ, ಪಿ.ಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕರು ಚಂದ್ರಶೇಖರ್, ಯೂಟ್ಯೋಬರ್ ಚೇತನ್, ಅಕ್ಷರದಾಸೂಹ ನಿರ್ದೇಶಕರಾದ ಯೋಗೇಶ್, ಮುಂಡರಾದ ಎಂ.ಕೆ, ಕುಮಾರ್, ರಘು, ಎಸ್ ಡಿ ಎಂ.ಸಿ ಅದ್ಯಕ್ಷರು ಹೆಚ್ ಆರ್ ಪ್ರದೀಪ್, ಮುಖ್ಯ ಶಿಕ್ಷಕರಾದ ಬಸವರಾಜಪ್ಪ, ಕುಮಾರ್, ದೇವರಾಜೇಗೌಡ, ರೂಪ, ಲವಣ್ಣ, ಶಿಕ್ಷಕರಾದ ಚನ್ನಕೇಶವ, ಚಂದ್ರಶೇಖರ್, ಸವಿತಾ, ಪವಿತ್ರ, ಶ್ರೀಧರ್, ಪುಷ್ಪ ಸೇರಿದಂತೆ ಮಕ್ಕಳು ಪೋಷಕರುಗಳಿದ್ದರು..