ಆರು ದಿನಗಳವರೆಗೆ ಗ್ರಾಮದೇವತೆ ಅದ್ದೂರಿ ಜಾತ್ರೆ

ಆರು ದಿನಗಳವರೆಗೆ ಗ್ರಾಮದೇವತೆ ಅದ್ದೂರಿ ಜಾತ್ರೆ

ಆರು ದಿನಗಳವರೆಗೆ ಗ್ರಾಮದೇವತೆ ಅದ್ದೂರಿ ಜಾತ್ರೆ

ಮುದ್ದೇಬಿಹಾಳ: ತಾಲೂಕಿನ ಆಲಕೊಪ್ಪರ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಜನೆವರಿ 25 ಗುರುವಾರ ದಿಂದ ಜನೆವರಿ 30 ಮಂಗಳವಾರ ದವರೆಗೆ ವಿವಿಧ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯುವುದು. ಜನೆವರಿ 25 ಗುರುವಾರದಂದು ಸಾಯಂಕಾಲ 4 ಗಂಟೆಗೆ ಜನೆವರಿ 6ರಂದು ಪ್ರಾರಂಭವಾದ ಕಲಬುರ್ಗಿಯ ಶ್ರೀ ಶರಣಬಸವೇಶ್ವರರ ಮಹಾ ಪುರಾಣ ಮಂಗಲೋತ್ಸವ ಮಾಡುವುದು. ನಂತರ 5 ಗಂಟೆಯಿಂದ ಡೊಳ್ಳು ವಾದ್ಯ ವೈಭವ ಗಳೊಂದಿಗೆ ಊರ ಗ್ರಾಮ ದೇವತೆಯನ್ನು ಗುಡ್ಡದ  ಗ್ರಾಮದೇವತೆ ದೇವಸ್ಥಾನಕ್ಕೆ ಹೋಗಿ ಗಂಗಾಸ್ನಾನ ಮಾಡಿಕೋಂಡು ಮರಳಿ ಮರುದಿನ ಬರುವುದು. ಜನೆವರಿ 26 ಶುಕ್ರವಾರದಂದು ಮುಂಜಾನೆ 8 ಗಂಟೆಗೆ ಚಂಡಿ ಹೋಮ,ಹಾಗೂ ಮಹಾರುಧ್ರಾಭಿಷೇಕ ಮತ್ತು ಮಧ್ಯಾಹ್ನ 12 ಗಂಟೆಗೆ ಧರ್ಮಸಭೆ.ಅಂದೇ ರಾತ್ರಿ 10 ಗಂಟೆಗೆ ಊರಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಅಮೋಘಸಿದ್ದೇಶ್ವರ ಗಾಯನ ಸಂಘ ಕಲಬುರಗಿ ಹಾಗೂ ಶ್ರೀ ಲಗಮಾದೇವಿ ಗಾಯನ ಸಂಘ ಪಡಗಾನೂರ ಮತ್ತು ಮಡ್ಡಿ ಗ್ರಾಮದೇವತೆ ದೇವಸ್ಥಾನದಲ್ಲಿ ಶ್ರೀ ಅಮೋಘಸಿದ್ದೇಶ್ವರ ಗಾಯನ ಸಂಘ ಲಮಾನಟ್ಟಿ ಮತ್ತು ಶ್ರೀ ವಿಜಯ-ವಿಠ್ಠಲ ಡೊಳ್ಳಿನ ಗಾಯನ ಸಂಘ ಸೊನ್ಯಾಳ ಇವರಿಂದ ರಾತ್ರಿ ವಾದಿ ಮತ್ತು ಪ್ರತಿವಾದಿ ಡೊಳ್ಳಿನ ಪದಗಳು ಎರಡು ದೇವಸ್ಥಾನದಲ್ಲಿ ನಡೆಯುವುದು.27-01-2024 ಶನಿವಾರದಂದು  ಮುಂಜಾನೆ 10ಗಂಟೆಗೆ ಸುಪ್ರಸಿದ್ಧ ಮೋಡಿಕಾರರ ಆಟ.ಮಧ್ಯಾಹ್ನ  12 ಗಂಟೆಗೆ ಎತ್ತಿನ ಗಾಡಿ (ಪಟ್ಟಿ ಗಾಡಿ) ರೇಸ್ ಹೋಲದಲ್ಲಿ ಹೋಗಿ ಬರುವುದು. ಪ್ರಥಮ 21000, ದ್ವಿತೀಯ 15000,ತೃತೀಯ 10000, ಚತುರ್ಥಿ 5001 ರೂ ಇರುವುದು.ಅಂದೇ ರಾತ್ರಿ 10 ಗಂಟೆಗೆ ಊರ ಗ್ರಾಮದೇವತೆ ದೇವಸ್ಥಾನದಲ್ಲಿ ಗೋಪಾಲ ಹೂಗಾರ ಮತ್ತು ಗೋಪಾಲ ಇಂಚಗೇರಿ,ಹಾಗೂ ಮಾಳು ನಿಪನಾಳ ಇವರ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವುದು.28-01-2024  ರವಿವಾರ ದಂದು ಮುಂಜಾನೆ 10 ಗಂಟೆಗೆ ಸಾರವಾಡ ಗ್ರಾಮ ದವರಿಂದ ಗೊಂಬೆ ಕುಣಿತ. ಮತ್ತು ತೆರಬಂಡಿ ಸ್ಪರ್ಧೆ ನಡೆಯುವುದು. ಪ್ರಥಮ 10ಗ್ರ್ಯಾಂ ಬಂಗಾರ,ದ್ವೀತಿಯ 5ಗ್ರ್ಯಾಂ ಬಂಗಾರ,ತೃತೀಯ 21000,ಚತುರ್ಥಿ 15000 ರೂಪಾಯಿ ಬಹುಮಾನ ಇರುತ್ತದೆ. ಮತ್ತು ಅಂದೇ ರಾತ್ರಿ 10 ಗಂಟೆಗೆ ಶ್ರೀ ಪುಟ್ಟರಾಜ ನಾಟ್ಯ ಸಂಘ ಬಾಗಲಕೋಟ ಇವರಿಂದ ಹೆಣ್ಣು ಸಂಸಾರದ ಕಣ್ಣು ಎಂಬ ಸಾಮಾಜಿಕ ನಾಟಕ ಪ್ರದರ್ಶನ ಇರುವುದು.29-01-2024 ಸೋಮವಾರದಂದು ಬೆಳ್ಳಿಗ್ಗೆ 10 ಗಂಟೆಗೆ ದಿಂಡಿನ ರೇಸ್  ಪ್ರಥಮ 11000,ದ್ವೀತಿಯ 7001,ತೃತೀಯ 5001, ನಂತರ 11 ಗಂಟೆಗೆ ಭಾರವಾದ ಕಲ್ಲು ಜಗ್ಗಿಸುವ ಸ್ಪರ್ಧೆ ಪ್ರಥಮ 25000,ದ್ವೀತಿಯ 15000,ತೃತೀಯ 7500 ರೂಪಾಯಿ.ಮತ್ತು  ಮಧ್ಯಾಹ್ನ 4 ಗಂಟೆಗೆ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಡೆಯುವುದು. ಪ್ರಥಮ 10001,ದ್ವೀತಿಯ7001,ತೃತೀಯ5001,ಚತುರ್ಥಿ3001 ರೂಪಾಯಿ ಈ ರೀತಿ ಬಹುಮಾನಗಳು ಇರುವುದು.30-01-2024 ಮಂಗಳವಾರದಂದು ಮುಂಜಾನೆ 10 ಗಂಟೆಗೆ ನಾಯಿ ರೇಸ್ ಇರುವುದು. ಪ್ರಥಮ 15001,ದ್ವೀತಿಯ 10001,ತೃತೀಯ 5001, ಬಹುಮಾನ ಇರುವುದು ‌ನಂತರ ಮಧ್ಯಾಹ್ನ 12 ಗಂಟೆಗೆ ಸ್ಥಳಿಯರಿಗಾಗಿ  ಕ್ರಿಕೆಟ್ ಟೂರ್ನಮೆಂಟ್ ಪ್ರಥಮ  5001,ದ್ವೀತಿಯ3001,ತೃತೀಯ 2001,ಇರುವುದು ಜಾತ್ರೆಯ ಅಂಗವಾಗಿ ಪ್ರತಿದಿನ ಅನ್ನಸಂತರ್ಪಣೆ ಇರುತ್ತದೆ. ಹಾಗೂ ಹೆಚ್ಚಿನ ಮಾಹಿಗಾಗಿ 9972333708,9901547819 ಈ ಸಂಖ್ಯೆಗೆ ಕರೆ ಮಾಡಿ ಎಂದು ಕಮೀಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.