ಹರಿನಾಮ ಸಂಕೀರ್ತನೆ
ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಈಜುಕೊಳ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 7, ಶುಕ್ರವಾರ ಸಂಜೆ 6-30ಕ್ಕೆ ಶ್ರೀಮತಿ ಸುಷ್ಮಾ ಜೋಯಿಸ್ ಇವರಿಂದ "ಹರಿನಾಮ ಸಂಕೀರ್ತನೆ" ಗಾಯನ ಕಾರ್ಯಕ್ರಮ ಏರ್ಪಡಿಸಿದ್ದು, ಇವರ ಗಾಯನಕ್ಕೆ ಹಾರ್ಮೋನಿಯಂ ವಾದನದಲ್ಲಿ ಶ್ರೀ ರಾಮು ಕೊಡೇಕಲ್ ಮತ್ತು ತಬಲಾ ವಾದನದಲ್ಲಿ ಶ್ರೀ ಭೀಮಾಶಂಕರ್ ಸಹಕರಿಸಲಿದ್ದಾರೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ.ಭುಜಂಗರಾವ್ ತಿಳಿಸಿದ್ದಾರೆ.