ಕುವೆಂಪು ಸಾಹಿತ್ಯಕ್ಕೆ ದಿಕ್ಸೂಚಿ ‘ವಿಶ್ವಕವಿ ಕುವೆಂಪು’
ಪ್ರೊ. ಕರೀಗೌಡ ಬೀಚನಹಳ್ಳಿ ಅವರು ತಮ್ಮ"ವಿಶ್ವಕವಿ ಕುವೆಂಪು " ಕೃತಿಯಲ್ಲಿ ಕುವೆಂಪು ಅವರ ಬಾಲ್ಯ, ವಿದ್ಯಾಭ್ಯಾಸ, ಜೀವನ ಹಾಗೂ ಅವರ ಒಟ್ಟು ಸಾಹಿತ್ಯವನ್ನು ಕುರಿತು ನೇರವಾಗಿ, ಸಂಕ್ಷಿಪ್ತವಾಗಿ, ಹಾಗೂ ಆಕರ್ಷಕವಾಗಿ ನಿರೂಪಿಸಿದ್ದಾರೆ. ಬೀಚನಹಳ್ಳಿ ಅವರು ಕುವೆಂಪು ಅವರ ಜೀವನ ಮತ್ತು ಸಾಹಿತ್ಯವನ್ನು ಒಂದು ಸುಂದರವಾದ ಕನ್ನಡಿಯಲ್ಲಿ ಹಿಡಿದು ಇಟ್ಟಿದ್ದಾರೆ. ಈ ಕೃತಿಯನ್ನು ಎಲ್ಲಾ ವಯೋಮಾನದ ವರು ಓದಬಹುದಾದ ಕುವೆಂಪು ಸಾಹಿತ್ಯದ ಬಗೆಗಿನ ಕೈಪಿಡಿಯಾಗಿದೆ. ಕುವೆಂಪು ಅವರ ಸಾಹಿತ್ಯಕ ಹಾಗೂ ವೈಚಾರಿಕ ವಿಚಾರಗಳನ್ನು ವಿಭಿನ್ನವಾದ ಅನುಸಂಧಾನಕ್ಕೆ ಕರೀಗೌಡರು ಒಳಗು ಮೂಡಿರುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ ಸುಂದರವಾದ ಮುದ್ರಣದಲ್ಲಿ ಪ್ರಕಟವಾಗಿರುವ ಈ ಕೃತಿಯನ್ನು ಎಲ್ಲರೂ ಓದಬೇಕಾಗಿದೆ. ಇದನ್ನು ಓದಿದರೆ ಕುವೆಂಪು ಸಾಹಿತ್ಯವನ್ನು ಒಮ್ಮೆಯಾದರೂ ಓದಬೇಕೆಂದು ಅನ್ನಿಸದೆ ಇರದು
ಎಂದು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು ಹೇಳಿದರು.
ಪುಸ್ತಕವನ್ನು ಬಿಡುಗಡೆ ಮಾಡಿದ ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಜೆ . ಶಶಿಧರ ಪ್ರಸಾದ್ ಅವರು ತಮ್ಮ ಮತ್ತು ಕುವೆಂಪು ಕುಟುಂಬದವರ ಸಂಬಂಧವನ್ನು
ನೆನಪಿಸಿಕೊಂಡು, ಕುವೆಂಪು ಬರೆಯುವ ಕಾಲದಲ್ಲಿ ಅವರು ಎದುರಿಸಿದ ಸಂಘರ್ಷಗಳನ್ನು ವಿವರಿಸಿದರು.
ಕರೀಗೌಡರು ನನ್ನನ್ನು ೧೭ ವರ್ಷಗಳ ನಂತರ ವಿವಿಗೆ ಕರೆದು ತಂದು ಪುಸ್ತಕ ಬಿಡುಗಡೆ ಮಾಡಿಸಿದ್ದು ಅವರ ವಿಶೇಷ ಎಂದು ಹೇಳಿದರು.
ಸಿ. ನಾಗಣ್ಣವರು ಪುಸ್ತಕವನ್ನು ಕುರಿತು ವಿವರವಾಗಿ ಮಾತನಾಡಿದರು.
" ಕುವೆಂಪು ಸಾಹಿತ್ಯವನ್ನು ಮತ್ತು ಅವರ ಬದುಕಿನ ಮೌಲ್ಯಗಳನ್ನು ಕುರಿತು
ಕರೀಗೌಡ ಅವರು ಈ ಕೃತಿಯಲ್ಲಿ ಅರ್ಥಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದಾರೆ.
ಕುವೆಂಪು ಅವರ ಜೀವನ ಮತ್ತು ಸಾಹಿತ್ಯದ ಸಮಗ್ರತೆ ಯನ್ನು ಅರಿಯುವ
ಒಂದು ಮುಖ್ಯ ದಿಕ್ಸೂಚಿ ಕೃತಿಯಾಗಿದೆ " ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೃತಿಕಾರ ಕರೀಗೌಡ ಬೀಚನಹಳ್ಳಿ , ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ನಂಜಯ್ಯ ಹೊಂಗನೂರು, ಕಿರಂ ಪ್ರಕಾಶನದ ಜಿ.ವಿ. ಧನಂಜಯ ಉಪಸ್ತಿತರಿದ್ದರು.
ಸಾರ್ವಜನಿಕರು,ಪ್ರಾಧ್ಯಾಪಕರುವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು.