ದೈಹಿಕ -ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯಕ - ಎಮ್ ಎಸ್ ಬಡದಾನಿ

ದೈಹಿಕ -ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯಕ - ಎಮ್ ಎಸ್ ಬಡದಾನಿ

     ಮುದ್ದೇಬಿಹಾಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಹಾಗೂ ವೀರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಟೇಬಲ್ ಟೆನಿಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ವಿಕಾಸದೊಂದಿಗೆ ನಾವಿನ್ಯ ಕಲಿಕೆ ಹಾಗೂ ಅವಧಾನವನ್ನು ಹೆಚ್ಚಿಸಲು ಸಹಕಾರಿಯಾಗಿವೆ ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿ ಸಂಪೂರ್ಣ ಸಹಕಾರ ನೀಡಿರುವ ಸಂಸ್ಥೆಯ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಮುತ್ತು ಅಂಗಡಿ ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸುವುದರಿಂದ ಅಭ್ಯಾಸದ ಜೊತೆ ನಿಮ್ಮ ಅಂಕ ಗಳಿಕೆಯು ಹೆಚ್ಚಾಗುತ್ತದೆ ನೀವು ಮುಂದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಪ್ರತಿನಿದಿಸುವ ಹೆಮ್ಮೆಯ ಸಾಧಕರಾಗಿ ಹೊರಹೊಮ್ಮಲಿ ಎಂದರು.ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಎಮ್ ಎಮ್ ಬೆಳಗಲ್ಲ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರರಾದ ಸಂಜು ಹಜೇರಿ ಹಾಗೂ ಎಲ್ಲ ಅತಿಥಿಗಳನ್ನು ಸನ್ಮಾನಿಸಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಧ್ಯಕ್ಷರಾದ ಬಿ ಎಮ್ ತಾಳಿಕೋಟಿ, ಉಚಿತ ಪ್ರಸಾದ ನಿಲಯದ ಚೆರಮನ್ನರಾದ ಎ ಜಿ ಗಂಗನಗೌಡರ, ನಿರ್ದೇಶಕರಾದ ಬಿ ಎಸ್ ಪಾಟೀಲ್, ಬಿ ಎಸ್ ಮೇಗಲಮನಿ,ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ ಎಚ್ ಮುದನೂರ, ತಾಲೂಕ ದೈಹಿಕ ಶಿಕ್ಷಣ ಅಧಿಕಾರಿಗಳಾದ ಎಸ್ ಬಿ ಕುಂಬಾರ,ಸಿ ಆರ್ ಪಿ ಬಸವರಾಜ ಮಾದರ ಮುಖ್ಯಗುರುಗಳಾದ ಎಲ್ ಎಚ್ ಫಿರಂಗಿ, ಬಿ ಎಸ್ ಹೊಸಗೌಡರ,ಜಿ ಎ ಜಾವಳಗೇರಿ, ಶೇಖರ ನಾಯಕ, ಎ ಜಿ ದಖನಿ,ಕ್ರೀಡಾ ಉಸ್ತುವಾರಿ ದೈಹಿಕ ಶಿಕ್ಷಕರಾದ ವೀರೇಶ ಗದಗ, ವೀರೇಶ ಲೋಟಗೇರಿ, ಮಂಜುನಾಥ ಸಜ್ಜನ, ಸಂದೀಪ ಪಾಟೀಲ್,ಸುನಿಲ ಪಾಟೀಲ ಚಿತ್ರಾ ಕುಪ್ಪಸ್ತ ಪ್ರಾರ್ಥಿಸಿದರು, ಸಂಜು ಹಜೇರಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು,ರಾಜು ಹಾದಿಮನಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.