ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಣ

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಣ
ಸುದ್ದಿ ಕಿರಣ ನ್ಯೂಸ್ ಡಿಸ್ಕ್

ಕೆಜಿಎಫ್ ಶಾಸಕಿ ಶ್ರೀಮತಿ ರೂಪಕಲಾ ಎಂ. ಶಶಿಧರ್ ಅವರಿಗೆ ಅಭಿನಂದನೆ 

ಕೆಜಿಎಫ್, ಆ. 6:

ಕೆಜಿಎಫ್ (ಕೋಲಾರ ಚಿನ್ನದ ಗಣಿ ಪ್ರದೇಶ) ನಗರದ ನಗರಸಭೆಯ ಮುಂಭಾಗದಲ್ಲಿ ಸ್ಥಾಪಿಸಲಾದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಕಂಚಿನ ಪ್ರತಿಮೆಯ ಜಾಗದಲ್ಲಿ, ಭವ್ಯವಾದ ನೂತನ ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಯಶಸ್ವಿಯಾಗಿ ಅನಾವರಣಗೊಳಿಸಿರುವ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಕಲಾ ಎಂ. ಶಶಿಧರ್ ಅವರಿಗೆ ಭಾರತರತ್ನ ಡಾ.ಅಂಬೇಡ್ಕರ್ ಶಿಕ್ಷಣ ಮತ್ತು ಕಲ್ಯಾಣ ಸಂಘದ ವತಿಯಿಂದ ಡಾ. ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಸಂಘದ ಸ್ಥಾಪಕ ಅಧ್ಯಕ್ಷ ಡಾ||ಆರ್.ಪ್ರಭಾಕರ್ ಅವರು ಹಾಗೂ ಇತರೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಮಾತನಾಡಿ, ನಗರದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಪ್ರತಿಮೆ ಪ್ರತಿಷ್ಠಾಪನೆಯ ಕನಸನ್ನು ನನಸಾಗಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಭಾರತ ಸಂವಿಧಾನದ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಅವರ ಮೌಲ್ಯಗಳು ಹಾಗೂ ಆದರ್ಶಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಕಂಚಿನ ಪ್ರತಿಮೆಯ ಸ್ಥಾಪನೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಕೆಜಿಎಫ್ ಭಾಗದ ಸಾರ್ವಜನಿಕರು ಹಾಗೂ ಅಂಬೇಡ್ಕರ್ ಅನುಯಾಯಿಗಳ ಬಹುದಿನಗಳ ಕನಸನ್ನು ಶಾಸಕರು ಈಡೇರಿಸಿದ್ದಾರೆ. ಅಷ್ಟೇ ಅಲ್ಲದೆ, ಯುವಜನತೆಗೆ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನೆನಪಿಸುವ ಪ್ರೇರಣೆಯಾಗಿ ಈ ಪ್ರತಿಮೆ ಕಾರ್ಯನಿರ್ವಹಿಸಲಿದೆ ಎಂದು ಸಂಘದ ಅಧ್ಯಕ್ಷ ಡಾ. ಆರ್. ಪ್ರಭಾಕರ್ ಹೇಳಿದರು.

ಸಂವಿಧಾನ ಶಿಲ್ಪಿಗೆ ಸಂಘದ ಗೌರವ ಸಮರ್ಪಿಸಿ, ಶ್ರೇಷ್ಠ ಜನಸೇವೆಗೆ ಸ್ಮರಣೀಯ ಕಾಣಿಕೆಯಾಗಿ ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಅನಾವರಣಗೊಳಿಸಿರುವ ಶಾಸಕಿ ಶ್ರೀಮತಿ ರೂಪಕಲಾ ಎಂ. ಶಶಿಧರ್ ಅವರ ಜನಸೇವಾ ಕಾರ್ಯ ಹಾಗೂ ಅಭಿವೃದ್ಧಿ ಚಿಂತನೆಗೆ ಸಂಘವು ಅಭಿನಂದನೆಗಳನ್ನು ಸಲ್ಲಿಸಿದೆ.

ಪತ್ರಿಕೆ ಬಿಡುಗಡೆ: 06ಕೆಜಿಎಫ್01 – ಶಾಸಕಿ ಶ್ರೀಮತಿ ರೂಪಕಲಾ ಎಂ. ಶಶಿಧರ್ ಅವರಿಗೆ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಮಾಡಿದ ಡಾ. ಆರ್. ಪ್ರಭಾಕರ್ ಹಾಗೂ ಬುದ್ಧ ಗುರುಗಳು.