ಹನಿಗವನ ರಚನಾ ಸ್ಪರ್ಧೆಯಲ್ಲಿ ಅತ್ಯುತ್ತಮ ಸ್ಥಾನ
ಕರುನಾಡ ಕಲ್ಪವೃಕ್ಷ ಸಾಹಿತ್ಯ ವೇದಿಕೆ (ರಿ) ಜಿಲ್ಲಾ ಘಟಕ -ರಾಮನಗರದ ವತಿಯಿಂದ ಅಪಹಾಸ್ಯ ವಿಷಯದ ಕುರಿತು 24/09/2026 ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಆನ್ಲೈನ್ ಹನಿಗವನ ರಚನಾ ಸ್ಪರ್ಧೆಯಲ್ಲಿ ಪಾವಗಡದ ಕವಿಗಳಾದ ಶ್ರೀ ಬ್ಯಾಡನೂರು ವೀರಭದ್ರಪ್ಪ ಶಿವಶರಣ ಎಸ್ ರವರು ಅತ್ಯುತ್ತಮ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೀಯುತರು ಈಗಾಗಲೇ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿರುವುದಲ್ಲದೆ ಪ್ರಸ್ತುತ ಐದನೇ ಕೃತಿ ಕಾವ್ಯ ಗೊಂಚಲು ಲೋಕಾರ್ಪಣೆಗೆ ಸಿದ್ಧಗೊಂಡಿದ್ದು ಸದ್ಯದಲ್ಲೇ ಓದುಗರ ಕೈಸೇರಲಿದೆ.ಇವರು ಹಲವಾರು ಸಾಹಿತ್ಯ ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದು ಅತ್ಯಂತ ಮೃದು ಹಾಗೂ ಸರಳ ವ್ಯಕ್ತಿತ್ವಕ್ಕೆ ಮಾದರಿಯಾಗಿದ್ದಾರೆ.ಇವರ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಗಳಿಗೆ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.