ಅನನ್ಯ ಎಚ್.ಸುಬ್ರಹ್ಮಣ್ಯ ರವರಿಗೆ ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ 2026

ಕಾಸರಗೋಡು ಕನ್ನಡ ಭವನದ ಸಂಸ್ಥಾಪಕ ಡಾ:ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಅಕ್ಟೋಬರ್ 18 ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದ “ದಸರಾ ಕವಿ ಸಮ್ಮೆಳನ “ಮತ್ತು “ಸಾಂಸ್ಕೃತಿಕ ಉತ್ಸವ”ದಲ್ಲಿ ಯುವ ಕವಯತ್ರಿ ಅನನ್ಯ ಎಚ್ ಸುಬ್ರಹ್ಮಣ್ಯ ಅವರಿಗೆ ಕಾಸರಗೋಡು ಅಂತರ್ ರಾಜ್ಯಮಟ್ಟದ “ದಸರಾ ಕವಿ ಸಾಧಕ ಪ್ರಶಸ್ತಿ 2026" ನೀಡಿ ಗೌರವಿಸಲಾಯಿತು.


ಅನನ್ಯ ಎಚ್ ಸುಬ್ರಹ್ಮಣ್ಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಗಂಗಾಧರ ಮತ್ತು ಜಯಶ್ರೀ ರವರ ಪುತ್ರಿಯಾಗಿರುತ್ತಾರೆ.