ಕಲ್ಯಾಣ ನಗರದ (ಧಾರವಾಡ) ಬಾಲಕಿಯರ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿನಿಯರ ಪರದಾಟ

ಕಲ್ಯಾಣ ನಗರದ (ಧಾರವಾಡ) ಬಾಲಕಿಯರ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿನಿಯರ ಪರದಾಟ

  ಧಾರವಾಡ: ನಗರದ ಕಲ್ಯಾಣ ನಗರದ ಸಮಾಜ ಕಲ್ಯಾಣ. ಇಲಾಖೆ ಸರ್ಕಾರಿ ಮೆಟ್ರಿಕ್ ಬಾಲಕಿಯರ ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರಿಗೆ ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಹಾಗೂ ನಿಲಯ ಪಾಲಕರನ್ನು  ಅಮಾನತುಗಾಗಿ ಎಸ್‌ಎಫ್‌ಐ ವಿದ್ಯಾರ್ಥಿಗಳು ಮಂಗಳವಾರದಂದು ವಸತಿ ನಿಲಯದ ಪಾಲಕರಿಗೆ ಮನವಿ ಸಲ್ಲಿಸಿದರು.

ಎಸ್‌ಎಫ್‌ಐ ಧಾರವಾಡ ಜಿಲ್ಲಾ  ಸಂಚಾಲಕರಾದ ಕೃಷ್ಣನಾಯ್ಕ ಮಾತನಾಡಿ, ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳಿಂದ ವಂಚನೆ ಮಾಡುತ್ತಿರುವುದು ಖಂಡನೀಯ ವಿಚಾರವಾಗಿದೆ. ನೂರಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಆಶ್ರಯವಾಗಿರುವ ಈ ವಸತಿ ನಿಲಯದಲ್ಲಿ ಸರ್ಕಾರ ನೀಡುವ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಮೆನು ಚಾರ್ಟ್ ಪ್ರಕಾರವಾಗಿ ಊಟ, ಉಪಚಾರ ಸಿಗುತ್ತಿಲ್ಲ. (ನೀರಿನ ದೊಡ್ಡ ಮಟ್ಟದ) ಸಮಸ್ಯೆ ಎದುರಾಗಿದೆ ಎಂದು ದೂರಿದರು.
ಗುಣಮಟ್ಟದ ಆಹಾರ ನೀಡುವಂತೆ ಅನೇಕ ಬಾರಿ ಹೇಳಿದ್ದರೂ ಹಾಗೂ ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿನಿಯರಿಗೆ ನೀರಿನ ಸಮಸ್ಯೆ ಎದುರಾಗಿದೆ. ಒಟ್ಟಾರೆ ರುಚಿಕರ ಆಹಾರ ನೀಡುತ್ತಿಲ್ಲ. ಹಾಜರಾತಿ ಆಹಾರ ತಕ್ಕಂತೆ ನೀಡುವುದಿಲ್ಲ. ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ ಸ್ವಚ್ಚತೆ ಮರೀಚಿಕೆಯಾಗಿದೆ ಎಂದು ಅಳಲು ತೋಡಿಕೊಂಡರು.

ಸಿಲೆಬಸ್ ಸೇರಿದಂತೆ ವಿದ್ಯಾರ್ಥಿ-ಗಳಿಗೆ ವಿಷಯವಾರು ಪುಸ್ತಕಗಳು ದೊರೆಯುತ್ತಿಲ್ಲ. ವಸತಿ ನಿಲಯದ ವಿದ್ಯಾರ್ಥಿಗಳ ನ್ಯಾಯಯುತ ಎಲ್ಲಾ ಬೇಡಿಕೆಗಳನ್ನು ಒಳಗೆ ಈಡೇರಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಸತಿ ನಿಲಯದ ಅಧ್ಯಕ್ಷರಾದ ಮಮತಾ ಕೊಡದ್ ಮಾತನಾಡಿ,  'ಬೇರೆ ಊರಿನಿಂದ ಬಂದು, ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದೇವೆ. ಹಾಸ್ಟೆಲ್‌ನಲ್ಲಿ ಮೂಲ ಸೌಕರ್ಯವಿಲ್ಲ. ನಾವೆಲ್ಲರೂ ನರಳುವ ಸ್ಥಿತಿಯಿದೆ. ವಸತಿ ನಿಲಯದಲ್ಲಿ ಸ್ವಚ್ಛತೆ ಸಮಸ್ಯೆ ವಿಪರೀತವಾಗಿದೆ. ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ವಿಪರೀತ ಹುಳುಗಳಿವೆ. ಅದರಲ್ಲೇ ಅಡುಗೆ ಮಾಡಿ ನೀಡಲಾಗುತ್ತಿದ್ದು, ಇದರಿಂದ ನಮಗೆಲ್ಲ ತುಂಬಾನೇ  ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಶೌಚಾಲಯದ ಅವ್ಯವಸ್ಥೆ ಹೆಚ್ಚಾಗಿದೆ. ಗುಣಮಟ್ಟದ ಆಹಾರ ಸಹ ಸಿಗುತ್ತಿಲ್ಲ. ಪುಸ್ತಕ, ನೀರಿನ ಬಕೆಟ್, ತಟ್ಟೆ, ಲೋಟ, ಶುಚಿ ಕಿಟ್, ಪ್ರಥಮ ಚಿಕಿತ್ಸಾ ಕಿಟ್, ಆಟದ ಸಾಮಗ್ರಿಗಳು, ಬೆಡ್‌ಶಿಟ್ ಗಳನ್ನೂ ನೀಡುತ್ತಿಲ್ಲ. ಸಮಸ್ಯೆಗಳ ಬಗ್ಗೆ ಹಲವು ಬಾರಿ ವಾರ್ಡನ್‌ಗೆ ತಿಳಿಸಿದರೂ ಸ್ಪಂದಿಸಿಲ್ಲ' ಎಂದು ದೂರಿದರು.

ಕಾರ್ಯದರ್ಶಿಯಾದ ಮಮತಾ ಮುಂಡರಗಿ ಮಾತನಾಡಿ, ಹಾಸ್ಟೆಲ್ ನಿರ್ವಹಣಗೆಯಲ್ಲಿ ಲೋಪ ಆಗುತ್ತಿದೆ. ನಮ್ಮಂಥ ಬಡ ಮಕ್ಕಳ ಹೆಸರಿನಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ.ಹುಳು ಬಿದ್ದ ಸಾಮಗ್ರಿಯಿಂದ ತಯಾರಿಸಿದ ಅಡುಗೆ ತಿಂದು ಏನಾದರೂ ತೊಂದರೆಯಾದರೆ, ಇಲಾಖೆ ಅಧಿಕಾರಿಗಳೇ ಹೊಣೆ. ಇಲಾಖೆಯ ಹಿರಿಯ ಅಧಿಕಾರಿಗಳು, ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸ ಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು. ಹಾಸ್ಟೆಲ್‌ನಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಬೇಕು.  ನೀರಿನ ವ್ಯವಸ್ಥೆ ಬೇಗನೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ವಸತಿ ನಿಲಯ ಘಟಕದ ಉಪಾಧ್ಯಕ್ಷರಾದ ವರ್ಷ, ನಂದಿನಿ ಜಿ, ಲಕ್ಷ್ಮಿ ಹೆಚ್, ರಾಧಿಕಾ, ವಸತಿ ನಿಲಯ ಘಟಕದ ಸಹಕಾರಿದರ್ಶಿರಾದ ದೀಪಿಕಾ, ಸೌಮ್ಯ ಮ್ಯಾಗಡಿ, ದಿವ್ಯ, ವಿದ್ಯಾ, ದುರ್ಗಾ, ಮಾನಸಿ ಎಮ್, ಸ್ವಾತಿ ಮಾನ್ಗ್, ಮಹೇಶ್ವರಿ, ಅಕ್ಷತಾ, ಈಶ್ವರಿ, ಅಪೇಕ್ಷ ಕಾಂಬ್ಳೆ, ರಾಧಿಕಾ ಎಲ್, ಸ್ನೇಹ ಕೆ, ಪವಿತ್ರ, ಬಸಮ್ಮ, ನಂದಿನಿ, ಭಾಗ್ಯ, ಅಂಜಲಿ, ಕೀರ್ತನ, ಮಮತಾ ಎಮ್, ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಇದ್ದರು.