ಬುದ್ಧ-ಬಸವ-ಅಂಬೇಡ್ಕರ್ ರಾಜ್ಯರತ್ನ ಪ್ರಶಸ್ತಿ ಪ್ರದಾನ | ಕಲಬುರಗಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಸಂಭ್ರಮ

May 24, 2026 - 12:24
 0  13
ಬುದ್ಧ-ಬಸವ-ಅಂಬೇಡ್ಕರ್ ರಾಜ್ಯರತ್ನ ಪ್ರಶಸ್ತಿ ಪ್ರದಾನ | ಕಲಬುರಗಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಸಂಭ್ರಮ

ಕಲಬುರಗಿ: ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೆಲ್‌ಫೇರ್ ಟ್ರಸ್ಟ್ ಹಾಗೂ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ ಸಹಯೋಗದಲ್ಲಿ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ “ಬುದ್ಧ, ಬಸವ, ಅಂಬೇಡ್ಕರ್ ರಾಜ್ಯರತ್ನ ಪ್ರಶಸ್ತಿ” ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ Allamaprabhu Patil, ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಸಮಾಜದಲ್ಲಿ ಸಮಾನತೆ, ಸಹೋದರತೆ ಹಾಗೂ ಸಾಮಾಜಿಕ ನ್ಯಾಯದ ಬಲವಾದ ಸಂದೇಶವನ್ನು ಸಾರುತ್ತವೆ ಎಂದು ಹೇಳಿದರು.

ಯುವಜನತೆ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣ ಹಾಗೂ ಸಂವಿಧಾನದ ಮೌಲ್ಯಗಳನ್ನು ಉಳಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ Shashiil Namoshi, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸಿಪಿಐ ಮುಖಂಡ ಶಂಕರ ಕುಬೇರ ರಹಮಾನೆ, ಸುರೇಶ್ ಬಡಿಗೇರ, ಜಗನ್ನಾಥ ಸೂರ್ಯವಂಶಿ, ವಿಜಯಕುಮಾರ ಕಟ್ಟಿಮನಿ, ಮಲ್ಲಣ್ಣ ಮಡಿವಾಳ, ಮಲ್ಲಿನಾಥ ನಾಗನಳ್ಳಿ, ಗುರು ಬಂಡಿ, ಸವಿತಾ ನಾಶಿ, ದೇವಕಾ ಶೆಟ್ಟಿ, ಅನ್ನಪೂರ್ಣ ಸಂಗೋಳಗಿ, ಅಶ್ವಿನಿ ಚವ್ಹಾಣ, ಸುಮಾ ಎಸ್. ಕವಲ್ದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು “ಬುದ್ಧ, ಬಸವ, ಅಂಬೇಡ್ಕರ್ ರಾಜ್ಯರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು.

What's Your Reaction?

like

dislike

love

funny

angry

sad

wow