ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಮೈಸೂರಿನಲ್ಲಿ ಪೊಲೀಸ್ ಸಭೆ

ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಮೈಸೂರಿನಲ್ಲಿ ಪೊಲೀಸ್ ಸಭೆ

     ಆಗಸ್ಟ್ ೧೩ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕನ್ನಡಪರ ಹಿರಿಯ ಹೋರಾಟಗಾರರ ವಾಟಾಳ್ ನಾಗರಾಜ್ ಅವರು ಕರೆದಿರುವ ಕರ್ನಾಟಕ ಬಂದ್ ವಿಚಾರದಲ್ಲಿ ಇಂದು ಬೆಳಗ್ಗೆ ಮೈಸೂರಿನ ಕೃಷ್ಣರಾಜ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀ ಧನರಾಜ್ ಅವರ ನೇತೃತ್ವದಲ್ಲಿ ವಿವಿಧ ಕನ್ನಡಪರ ಹೋರಾಟಗಾರರನ್ನು ಕರೆದು ಸಭೆ ನಡೆಸಲಾಯಿತು
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕಾದ ಧನರಾಜ್ ಅವರು ಬಂದ್ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು
ಸಭೆಯಲ್ಲಿ ಕನ್ನಡಪರ ಹಿರಿಯ ಹೋರಾಟಗಾರರಾದ ಶಿವಶಂಕರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷರಾದ ಬಾಲಕೃಷ್ಣ, ಕನ್ನಡ ಕ್ರಾಂತಿದಳ ಅಧ್ಯಕ್ಷರಾದ ತೇಜಸ್ವಿ ನಾಗಲಿಂಗಸ್ವಾಮಿ, ಮಾಜಿ ನಗರ ಪಾಲಿಕೆ ಸದಸ್ಯರು ಕನ್ನಡ ಹೋರಾಟಗಾರರಾದ ಪಾರ್ಥಸಾರಥಿ, ಕರ್ನಾಟಕ ವೀರ ಕೇಸರಿ ಪಡೆ ಅಧ್ಯಕ್ಷರಾದ ಮಧುವನ ಚಂದ್ರು, ಜನರಿಗಾಗಿ ಸೇವಾ ಸಮಿತಿ ಅಧ್ಯಕ್ಷ ಆಟೋ ಮಹೇಶ್ ಕುಮಾರ್, ಕನ್ನಡ ಸೇನೆ ಮೈಸೂರು ಜಿಲ್ಲಾಧ್ಯಕ್ಷಾದ ಶೈಲಜಾ, ಹೋರಾಟಗಾರರಾದ ನಾಲಬೀದಿ ರವಿ, ಮಾದಪ್ಪ ಇನ್ನಿತರರು ಉಪಸ್ಥಿತರಿದ್ದರು