ಸುಧೀಂದ್ರನಗರ ರಾಯರ ಮಠದಲ್ಲಿ  ಗುರುರಾಯರ ಆರಾಧನೆ 

ಸುಧೀಂದ್ರನಗರ ರಾಯರ ಮಠದಲ್ಲಿ  ಗುರುರಾಯರ ಆರಾಧನೆ 

        ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನಗರದ ಈಜುಕೊಳ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 'ಕಲಿಯುಗದ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 19 ರಿಂದ ಸೆಪ್ಟೆಂಬರ್ 1ರ ವರೆಗೆ ಆಯೋಜಿಸಲಾಗಿದೆ.
ಆಗಸ್ಟ್ 19-ಶ್ರೀಮನ್ಮಾಧವತೀರ್ಥ ಮಠಾಧೀಶರಾದ ಶ್ರೀ 1008 ಶ್ರೀ ವಿದ್ಯಾವಲ್ಲಭಮಾಧವತೀರ್ಥ ಶ್ರೀ ಪಾದಂಗಳವರಿಂದ ಸಮಾರಂಭದ ಉದ್ಘಾಟನೆ ಮತ್ತು ಅನುಗ್ರಹ ಸಂದೇಶ.
ಭಜನಾ ಕಾರ್ಯಕ್ರಮ : ಪ್ರತಿದಿನ ಸಂಜೆ 5-30ಕ್ಕೆ ವಿವಿಧ ಭಜನಾ ಮಂಡಲಿಗಳ ಸದಸ್ಯರಿಂದ "ಹರಿ ಭಜನೆ"
ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 6-30ಕ್ಕೆ) ಆಗಸ್ಟ್ 20-ಕೆ.ಪಿ. ಶಿಶಿರ್ ಮತ್ತು ಸಂಗಡಿಗರಿಂದ "ಹರಿದಾಸ ವರ್ಷಿಣಿ", ಆಗಸ್ಟ್ 21-ಪ್ರಾಣೇಶ್ ಪಿ. ಭಾರಧ್ವಾಜ್ ಮತ್ತು ಸಂಗಡಿಗರಿಂದ "ಹರಿದಾಸ ವೈಭವ", ಆಗಸ್ಟ್ 22-ಡಾ|| ಮಾಲಿನಿ ರವಿಶಂಕರ್ ಶಿಷ್ಯೆಯರಾದ ಕು|| ಶ್ರೇಯಾ ಮತ್ತು ಕು|| ಮಂದಾರ ಇವರಿಂದ "ಭರತನಾಟ್ಯ ಪ್ರದರ್ಶನ", ಆಗಸ್ಟ್ 23-ಶ್ರೀಮತಿ ಮಾನಸಾ ಕುಲಕರ್ಣಿ, ಶ್ರೀಮತಿ ಸುಮಲತಾ ಮಂಜುನಾಥ್ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ", ಆಗಸ್ಟ್ 24-ಕು|| ನಿರೀಕ್ಷ ಎಂ. ರಾವ್ ಮತ್ತು ಸಂಗಡಿಗರಿಂದ "ಹರಿದಾಸ ಝೇಂಕಾರ", ಆಗಸ್ಟ್ 25-ಕು|| ಸ್ಫೂರ್ತಿ ಗುರುಪ್ರಸಾದ್ ಮತ್ತು ಸಂಗಡಿಗರಿಂದ "ವೀಣಾ ವಾದನ), ಆಗಸ್ಟ್ 26- ಶ್ರೀ ಸುಶ್ರುತ್ ರಾವ್ ಮತ್ತು ಸಂಗಡಿಗರಿಂದ "ಹರಿದಾಸ ನಮನ".
ಧಾರ್ಮಿಕ ಪ್ರವಚನ ಕಾರ್ಯಕ್ರಮ : ಆಗಸ್ಟ್ 27-ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಆಗಸ್ಟ್ 28-ಶ್ರೀ ವೆಂಕಟನರಸಿಂಹಾಚಾರ್, ಆಗಸ್ಟ್ 29- ಶ್ರೀ ಮರುತಾಚಾರ್ , ಆಗಸ್ಟ್ 29-ಶ್ರೀ ಮಾಳಗಿ ಆನಂದತೀರ್ಥಾಚಾರ್, ಆಗಸ್ಟ್ 30-ಶ್ರೀ ದ್ವೈಪಾಯನಾಚಾರ್, ಆಗಸ್ಟ್ 31-ಶ್ರೀಕಲ್ಯಾ ಶ್ರೀಕಾಂತಾಚಾರ್ ಇವರುಗಳು ಪ್ರವಚನ ನೀಡಲಿದ್ದಾರೆ.