ಆಗಸ್ಟ್ 13ರಂದು ಕುಚಿಪುಡಿ ನೃತ್ಯ ಪ್ರಾತ್ಯಕ್ಷಿಕೆ

ಆಗಸ್ಟ್ 13ರಂದು ಕುಚಿಪುಡಿ ನೃತ್ಯ ಪ್ರಾತ್ಯಕ್ಷಿಕೆ

       ಬೆಂಗಳೂರು: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ನಿಯಮಿತ ಶೈಕ್ಷಣಿಕ ಚಟುವಟಿಕೆಗಳ ಅಂಗವಾಗಿ ಕುಚಿಪುಡಿ ನೃತ್ಯದ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕುಚಿಪುಡಿ ಕ್ಷೇತ್ರದ ಖ್ಯಾತ ನೃತ್ಯ ಕಲಾವಿದೆ ಹಾಗೂ ಬೆಂಗಳೂರಿನ ನೃತ್ಯಾಂಕುರ ಫೌಂಡೇಶನ್‌ನ ಸಂಸ್ಥಾಪಕರಾದ ವಿದುಷಿ ಶ್ರೀಮತಿ ರೇಖಾ ಸತೀಶ್ ಅವರು ಈ ಉಪನ್ಯಾಸ–ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮವು 2026ರ ಆಗಸ್ಟ್ 13ರಂದು, ಗುರುವಾರ ಸಂಜೆ 5.30ಕ್ಕೆ, ಬೆಂಗಳೂರಿನ ಶ್ರೀನಿವಾಸನಗರದ ಅಚ್ಯುತ ಪಾರ್ಟಿ ಹಾಲ್‌ನಲ್ಲಿ ನಡೆಯಲಿದೆ.
ಕುಚಿಪುಡಿ ನೃತ್ಯದ ಪರಂಪರೆ, ವಿಶೇಷತೆ, ನೃತ್ಯ ಸಂಯೋಜನೆ, ವೇಷಭೂಷಣ ಹಾಗೂ ಪ್ರದರ್ಶನದ ವಿವಿಧ ಆಯಾಮಗಳ ಕುರಿತು ಉಪನ್ಯಾಸದ ಜೊತೆಗೆ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಲಾಗುವುದು.
ಈ ಕಾರ್ಯಕ್ರಮವು ಎಲ್ಲರಿಗೂ ಉಚಿತ ಪ್ರವೇಶವಾಗಿದ್ದು, ಕಲಾಸಕ್ತರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಈ ಕಾರ್ಯಕ್ರಮವನ್ನು ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನ ಕಲಾತ್ಮಕ ನಿರ್ದೇಶಕಿ ವಿದುಷಿ ಶ್ರೀಮತಿ ಪವಿತ್ರಾ ಪ್ರಶಾಂತ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.