ಮಿಸ್ಟರ್ ಚಾಯಿ’ ನೂತನ ಮಳಿಗೆ ಶುಭಾರಂಭ: ರೂ.10ಕ್ಕೆ ಟೀ ಲಭ್ಯ

ಮಿಸ್ಟರ್ ಚಾಯಿ’ ನೂತನ ಮಳಿಗೆ ಶುಭಾರಂಭ: ರೂ.10ಕ್ಕೆ ಟೀ ಲಭ್ಯ

     ಬೇತಮಂಗಲ: ಚಹಾ ಹಾಗೂ ಕಾಫಿ ಪ್ರಿಯರಿಗಾಗಿ ಬೇತಮಂಗಲದಲ್ಲಿ ‘ಮಿಸ್ಟರ್ ಚಾಯಿ’ (Mr. Chai) ನೂತನ ಮಳಿಗೆಯು ಇತ್ತೀಚೆಗೆ ಶುಭಾರಂಭಗೊಂಡಿದೆ.

ಪಟ್ಟಣದ ಪ್ರಮುಖ ಕೆಜಿಎಫ್–ವಿಕೋಟೆ ಮುಖ್ಯ ರಸ್ತೆಯಲ್ಲಿರುವ ಬದ್ರಿ ಕಾಂಪ್ಲೆಕ್ಸ್‌ನಲ್ಲಿ ಈ ಹೊಸ ಘಟಕವನ್ನು ಆರಂಭಿಸಲಾಗಿದ್ದು, ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ.

ಆಧುನಿಕ ಶೈಲಿಯಲ್ಲಿ ವಿನ್ಯಾಸಗೊಂಡಿರುವ ಈ ಮಳಿಗೆಯಲ್ಲಿ ಗ್ರಾಹಕರಿಗೆ ರುಚಿಕರವಾದ ಕಾಫಿ, ವೈವಿಧ್ಯಮಯ ಟೀ ಗಳಾದ ರಾಜಸ್ತಾನ್ ಚಾಯ್, ಮುಂಬೈ ಚಾಯ್, ಕೇರಳ ಚಾಯ್, ಚೆನ್ನೈ ಚಾಯ್, ಮತ್ತು ವಿವಿಧ ಬಗೆಯ ಫ್ರೆಶ್ ಜ್ಯೂಸ್‌ಗಳು, ಮಿಲ್ಕ್ ಶೇಕ್‌ಗಳು, ಮಾಕ್ಟೇಲ್‌ಗಳು, ಬಿಸ್ಕೆಟ್‌ಗಳು ಐಸ್ಕ್ರೀಂ ಹಾಗೂ ತಂಪು ಪಾನೀಯಗಳು ಲಭ್ಯವಿವೆ.

ವಿಶೇಷ ಆಫರ್: ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಳಿಗೆಯಲ್ಲಿ ವಿಶೇಷವಾಗಿ ಒಂದು ಕಪ್ ಟೀ ಕೇವಲ 10 ರೂಪಾಯಿಗೆ ನೀಡಲಾಗುತ್ತಿದೆ.

ಗುಣಮಟ್ಟದ ಪಾನೀಯಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದ್ದು, ಬೇತಮಂಗಲ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ಪ್ರಯಾಣಿಕರು ನೂತನ ಮಳಿಗೆಗೆ ಭೇಟಿ ನೀಡಿ ರುಚಿಕರ ಪಾನೀಯಗಳ ಅನುಭವ ಪಡೆಯಬಹುದು.