ದೇವಸ್ಥಾನದ ತಡೆಗೋಡೆ ತೆರವು ವಿರೋಧಿಸಿ ಪಿಡಿಓ ವಿರುದ್ಧ ಪ್ರತಿಭಟನೆ
ಕೃಷ್ಣರಾಜಪೇಟೆ: ತಾಲ್ಲೂಕಿನ ಕಿಕ್ಕೇರಿ ಸಮೀಪದ ಆನೆಗೊಳ ಗ್ರಾಮದ ಲಕ್ಷ್ಮೀದೇವಿ (ಆನೆಗೊಳಮ್ಮ) ದೇವಸ್ಥಾನದ ಸುತ್ತ ನಿರ್ಮಿಸಲಾಗಿದ್ದ ಕಾಂಪೌಂಡ್ ಅನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವಿಕುಮಾರ್ ಅವರು ಏಕಾಏಕಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರು ಮಾತನಾಡಿ ಸಾರ್ವಜನಿಕರ ಸಹಕಾರ ಹಾಗೂ ದೇಣಿಗೆಯಿಂದ ಲಕ್ಷ್ಮೀದೇವಿ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ದೇವಸ್ಥಾನದ ಸುತ್ತಲೂ ಭದ್ರತೆ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಕಾಂಪೌಂಡ್ ನಿರ್ಮಿಸಲಾಗಿತ್ತು ಆದರೆ ಯಾವುದೇ ಮುನ್ನೆಚ್ಚರಿಕೆ ಅಥವಾ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ನೀಡದೆ ದೇವಸ್ಥಾನದ ಕಾಂಪೌಂಡ್ ತೆರವುಗೊಳಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ಆವರಣದ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ತಡೆಗೋಡೆಯನ್ನು ಪುನರ್ನಿರ್ಮಿಸಬೇಕು ಹಾಗೂ ತೆರವುಗೊಳಿಸಿರುವ ಕುರಿತು ಸೂಕ್ತ ಕಾರಣವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇಂತಹ ಬೇಜವ್ದಾರಿ ತೂರಿದ ಪಿಡಿಓ ರವನ್ನು ಅಮಾನತ್ತು ಗೊಳ್ಳಿಸಬೇಕು , ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಣೇಶ್, ಹರೀಶ್, ಪ್ರದೀಪ್, ನಾಗೇಶ್, ಸುರೇಶ್, ಸತೀಶ್, ದೀಲೀಪ್, ಸುನೀಲ್, ಕೌಷಿಕ್, ಸಚ್ಚಿ, ರಾಜಪ್ಪ, ನಾಗೇಂದ್ರ, ರಾಜಣ್ಣ, ಶಾಂತಣ್ಣ, ಪ್ರಸನ್ನ, ನಾಗರಾಜಣ್ಣ,ಸೇರಿದಂತೆ ಮತ್ತಿತ್ತರರು ಇದ್ದರು..