ಅಭಿವೃದ್ಧಿಕುಂಠಿತ:ಹೂಡಿ ವಿಜಿಕುಮಾರ್ ಆರೋಪ

ಅಭಿವೃದ್ಧಿಕುಂಠಿತ:ಹೂಡಿ ವಿಜಿಕುಮಾರ್ ಆರೋಪ

ಮಾಲೂರು ತಾಲ್ಲೂಕಿನಲ್ಲಿ ಅಧಿಕಾರಿಗಳ ದುರ್ಬಳಕೆ:ಅಭಿವೃದ್ಧಿಕುಂಠಿತ:ಹೂಡಿ ವಿಜಿಕುಮಾರ್ ಆರೋಪ ಮಾಲೂರು :ತಾಲೂಕಿನಲ್ಲಿ ಸ್ಥಳೀಯ ಶಾಸಕರು ಮುಖಂಡರು ಮತ್ತು ಜನರನ್ನು ಬೆದರಿಸಿ ಆಡಳಿತ ನಡೆಸುತ್ತಿದ್ದಾರೆ ಮತ್ತು ತಾಲೂಕಿನಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದು ಜೆಡಿಎಸ್ ಮುಖಂಡ ಹೂಡಿ ವಿಜಕುಮಾರ್ ಆರೋಪಿಸಿದರು.  

ತಾಲ್ಲೂಕಿನ ತೋರಲಕ್ಕಿ ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಲೂರು ತಾಲೂಕಿನಾದ್ಯಂತ ಯಾವುದೇ ರಸ್ತೆಗಳಾಗಲಿ ಅಥವಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿಯಾಗಲಿ ಸರಿಯಾಗಿ ನಡೆಯುತ್ತಿಲ್ಲವೆಂದು ಸಭೆಯಲ್ಲಿ ತಿಳಿಸಿದರು.
ಸ್ಥಳೀಯ ಶಾಸಕರು ಮತ್ತು ಮುಖಂಡರು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಜನರಿಗೆ, ರಸ್ತೆಗಳಿಗೆ ಹಾಗೂ ಆಸ್ತಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು . *ಸರ್ಕಾರದಿಂದ ೩,೨೦೦ ಕೋಟಿ ರೂ. ಅನುದಾನ ತರಲಾಗಿದೆ* ಎಂದು ಹೇಳಲಾಗುತ್ತಿದ್ದರೂ, ಸ್ಥಳೀಯ ಮಟ್ಟದಲ್ಲಿ ಮತ್ತು ಗಡಿ ಭಾಗದ ರಸ್ತೆಗಳಲ್ಲಿ ಯಾವುದೇ ಅಭಿವೃದ್ಧಿ ಕಾಣಿಸುತ್ತಿಲ್ಲ. ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಜನರ ವಿಶ್ವಾಸದೊಂದಿಗೆ ಒಳ್ಳೆಯ ಆಡಳಿತ ಬರಲಿದ್ದು, ಯಾರೂ ಕೂಡ ಭಯಪಡುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.ಗ್ಯಾರಂಟಿ ಯೋಜನೆಗಳ ಮುಖವಾಡ ಕಳಚಿಬಿದ್ದಿದೆ: ಹಾಲು, ಬಸ್ ದರ ಏರಿಕೆಯಿಂದ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ 
 ಉಚಿತ ಕೊಡುಗೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ್ ಸರ್ಕಾರವು, ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಯನ್ನು ಮನಬಂದಂತೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಸಾರ್ವಜನಿಕರು ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಉಚಿತದ ಹೆಸರಿನಲ್ಲಿ ಜನರಿಗೆ ವಂಚನೆ:
ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿರುವ ಸರ್ಕಾರ, ವಾಸ್ತವದಲ್ಲಿ ಜನಸಾಮಾನ್ಯರಿಗೆ ಸರಿಯಾದ ರೀತಿಯಲ್ಲಿ ಯಾವುದೇ ಸೌಲಭ್ಯ ಸಿಗದಂತೆ ಮಾಡುತ್ತಿದೆ. ಇದರೊಂದಿಗೆ ಯಾವುದೇ ಮುನ್ಸೂಚನೆ ನೀಡದೆ ಬಸ್ ಟಿಕೆಟ್ ದರವನ್ನು ಶೇಕಡಾ 25%ರಷ್ಟು ಗಣನೀಯವಾಗಿ ಹೆಚ್ಚಿಸಿರುವುದು ನೇರವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಭಾರಿ ಆರ್ಥಿಕ ಹೊರೆಯಾಗಿದೆ ಎಂದರು 
ರೈತರಿಗೆ ಸಿಗದ ಹಾಲಿನ ಧರದ ಲಾಭ:
ಕೇವಲ ಬಸ್ ಪ್ರಯಾಣವಷ್ಟೇ ಅಲ್ಲದೆ, ಹಾಲಿನ ಧರವನ್ನು ಹೆಚ್ಚಿಸಲಾಗಿದ್ದರೂ ಆ ಹೆಚ್ಚುವರಿ ಹಣ ನೇರವಾಗಿ ಕಷ್ಟಪಟ್ಟು ಹಾಲನ್ನು ಉತ್ಪಾದಿಸುವ ರೈತರಿಗೆ ತಲುಪುತ್ತಿಲ್ಲ. ಸರ್ಕಾರವೇ ಆ ಹಣವನ್ನು ಇಟ್ಟುಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ರೈತರು ಹಾಗೂ ಮುಖಂಡರು ಆರೋಪಿಸಿದ್ದಾರೆ. ಜನರ ದುಡ್ಡಿನಿಂದಲೇ ಸರ್ಕಾರಗಳು ಮೋಜು ಮಸ್ತು ಮಾಡುತ್ತಿದ್ದು, ಜನಸಾಮಾನ್ಯರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ ಎಂದು ಎಚ್ಚರಿಸಲಾಗಿದೆ.
**ಮಾಲೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು:*
ಇದೇ ವೇಳೆ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಮುಖಂಡ ಹೂಡಿ ವಿಜಿಕುಮಾರ್ , ಮಾಲೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಮೈತ್ರಿ ವಿಚಾರ ಹಾಗೂ ಹೈಕಮಾಂಡ್ ತೀರ್ಮಾನ ಏನೇ ಇರಲಿ, ಸ್ಥಳೀಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸಭೆ ಸೇರಿದಂತೆ ಎಲ್ಲಾ ಹಂತದ ಚುನಾವಣೆಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲಾಗುವುದು. ಜನರ ಆಶೀರ್ವಾದದೊಂದಿಗೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿ2028ಕ್ಕೆ ಶಾಸಕ ನಾಗಿ ವಿಜಯಶಾಲಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ 
ನೂಟವೆ ವೆಂಕಟೇಶ್v,ಮೈಲಾ oಡಹಳ್ಳಿ ನಾರಾಯಣಸ್ವಾಮಿ, ಅಂಜಿನಪ್ಪ ಸಿದ್ದಾರ್ಥಆನಂದ್, ಬಡಿಗಿ ಶ್ರೀನಿವಾಸ್ ಮಂಜುನಾಥ್ ಉದ್ದೇಶಿಸಿ ಮಾತನಾಡಿದರು, ಹೆಚ್ ನಾರಾಯಣಪ್ಪ ವಕೀಲ ನವೀನ್,ವೆಂಕಟೇಶಪ್ಪ ಬಿಲಾಲ್ ರಿಯಾಜ್ ಪಾಷ, ಹರೀಶ್ ಇತರರು ಉಪಸ್ಥಿತರಿದ್ದರು.